ಅಭಿಪ್ರಾಯ / ಸಲಹೆಗಳು

ರಕ್ತ ವರ್ಗಾವಣೆ ಸೇವೆಗಳು

 

ರಕ್ತನಿಧಿ ಕೇಂದ್ರಗಳು

ರಕ್ತವನ್ನು ದಾನಿಯಿಂದ ಪಡೆದು ಸಂಗ್ರಹಿಸಿಡುವ, ರಕ್ತದ ಮಾದರಿಯನ್ನು ತಿಳಿಸುವ, ರಕ್ತದಲ್ಲಿರುವ ಅಂಗಾಂಶಗಳನ್ನು ಬೇರ್ಪಡಿಸಿ ಸಂರಕ್ಷಿಸಿಡುವಂತಹ ಪರಿಸರವನ್ನು ಹೊಂದುವ ಸೌಲಭ್ಯಗಳುಳ್ಳಂತಹ ಸ್ವತಂತ್ರವಾದ ಕೇಂದ್ರವಾಗಿದೆ ಆಥವಾ ಇದು ಒಂದು ಆಸ್ಪತ್ರೆಯಲ್ಲಿರುವ ರಕ್ತದ ಪ್ರಯೋಗಾಲಯವಿದ್ದಂತೆ.

 

ರಕ್ತನಿಧಿ ಕೇಂದ್ರಗಳ ಪ್ರಮುಖ ಕಾರ್ಯಗಳು

ರಕ್ತ ನಿಧಿ ಕೇಂದ್ರವು ಆಸ್ಪತ್ರೆಯ ಒಂದು ಬಹುಮುಖ್ಯ ಅಂಗವಾಗಿದೆ. ಇದು ರಕ್ತ ದಾನಿಯ ನೊಂದಣಿ, ದೈಹಿಕ ತಪಾಸಣೆ, ರಕ್ತದ ಮಾದರಿ, ವಿವಿಧ ಮಾದರಿಯ ರೋಗಗಳನ್ನು ಪತ್ತೆ ಹಚ್ಚುವ ಪರೀಕ್ಷೆಗಳು, ರಕ್ತದಲ್ಲಿರುವ ಅದರ ಅಂಗಾಂಶಗಳನ್ನು ಬೇರ್ಪಡಿಸಿ ಶೇಖರಿಸಿಡುವುದು, ರಕ್ತದ ಬೇಡಿಕೆಗಳ ವಿವರದ ಪಟ್ಟಿಯನ್ನು ತಯಾರಿಸುವುದು, ರಕ್ತದ ಲಭ್ಯತೆಯ ವಿವರವನ್ನು ನೀಡುವುದು. ರಕ್ತದ ಬೇಡಿಕೆ ಬಂದಾಗ ರಕ್ತದ ಮಾದರಿಗಳನ್ನು ತುಲನೆ ಮಾಡಿ ವಿತರಿಸುವುದು, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಪೂರೈಕೆಗಾಗಿ ರಕ್ತದಾನಿಗಳ ಲಭ್ಯತೆಯ ವಿವರವನ್ನು ನೀಡುವುದು. ಸಂಗ್ರಹಿಸಿರುವ ರಕ್ತದ ಗುಣಮಟ್ಟದ ಜೊತೆಗೆ ಜೀವಿತಾವಧಿಯನ್ನು ಕಾಯ್ದು ಕೊಳ್ಳುವುದು. (ಲ್ಯುಕೋರೆಡಕ್ಷನ್, ವಿಕಿರಣ ಮತ್ತು ಲವಣ ತೊಳೆಯುವುದು) ಸೇರಿದಂತೆ ವಿವಿಧ ಚಟುವಟಿಕೆಗಳು ಪ್ರದರ್ಶನ.

 

ರಾಜ್ಯದಲ್ಲಿರುವ ರಕ್ತನಿಧಿ ಕೇಂದ್ರಗಳ ವಿವರಣೆ ಕೆಳಕಂಡಂತಿದೆ.

ರಾಜ್ಯದಲ್ಲಿರುವ ಒಟ್ಟು ರಕ್ತನಿಧಿ ಕೇಂದ್ರಗಳು

230

ಸರ್ಕಾರಿ ರಕ್ತನಿಧಿ ಕೇಂದ್ರಗಳು

43

ದತ್ತಿ (ಚಾರಿಟಬಲ್) ರಕ್ತನಿಧಿ ಕೇಂದ್ರಗಳು

66

ಖಾಸಗಿ ಆಸ್ಪತ್ರೆಗೆ ಹೊಂದಿಕೊಂಡಿರುವ ರಕ್ತ ನಿಧಿ ಕೇಂದ್ರಗಳು

108

ಖಾಸಗಿ ಆಸ್ಪತ್ರೆಗೆ ಹೊಂದಿಕೊಂಡಿರದೆ ಸ್ವತಂತ್ರವಾಗಿರುವ ರಕ್ತನಿಧಿ ಕೇಂದ್ರಗಳು

5

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿ ಕೇಂದ್ರಗಳು      

8

ಮೇಲಿನ ರಕ್ತನಿಧಿ ಕೇಂದ್ರಗಳಲ್ಲಿ ನ್ಯಾಕೋ ಸಹಾಯಾನುದಾನಿತ ರಕ್ತನಿಧಿ ಕೇಂದ್ರಗಳು

 

ಸರ್ಕಾರಿ ರಕ್ತನಿಧಿ ಕೇಂದ್ರಗಳು

39

ಸರ್ಕಾರೇತರ ಖಾಸಗೀ ರಕ್ತನಿಧಿ ಕೇಂದ್ರಗಳು

27

 

ರಕ್ತ ವಿಧಳನಾ ಘಟಕಗಳು

ರಕ್ತವು ಅನೇಕ ಜೀವಕೋಶಕಣಗಳಿಂದ ಹಾಗೂ ದ್ರಾವಣದ ರೂಪದಲ್ಲಿ ಕೂಡಿರುವ ದೇಹದ ಒಂದು ಭಾಗವಾಗಿದೆ ರಕ್ತದಲ್ಲಿರುವ ಕಣಗಳನ್ನು ಈ ಕೆಳಕಂಡಂತೆ ಹೆಸರಿಸಲಾಗಿದೆ.

 • ಕೆಂಪುರಕ್ತ ಕಣಗಳು
 • ಪ್ಲೇಟ್‍ಲೇಟ್‍ಗಳು
 • ಪ್ಲಾಸ್ಮ
 • ಪ್ಲಾಸ್ಮ ಪ್ರಾಕ್ಷೆನೇಷನ್ ಬಕ್ಸ್ (ಕ್ರೈಯೊಪ್ರಿಸಿಪಿಟೆಟ್)

ಪ್ರತೀ ರಕ್ತದ ಕಣಗಳನ್ನು ವಿವಿಧ ರೀತಿಯ ನಿಗದಿತ/ಉದ್ದೇಸಿತ ಕಾರ್ಯಗಳಿಗೆ ಮಾತ್ರ ಬಳಸಬಹುದಾಗಿದೆ. ಉದಾಹರಣೆಗೆ ಡೆಂಗ್ಯು, ಚಿಕನ್‍ಗುನ್ಯ ರೋಗಗಳಿಗೆ ಪ್ಲೇಟ್‍ಲೇಟ್ ಕಣಗಳನ್ನು ಬಳಸಬಹುದಾಗಿದೆ, ಹಾಗಾಗಿ ರಕ್ತದಲ್ಲಿರುವ ವಿವಿಧ ಕಣಗಳನ್ನು  ಬೇರ್ಪಡಿಸಿ ಶೇಕಡ 100% ರಕ್ತವನ್ನು ಮತ್ತದರ ಅಂಗಾಂಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ರಕ್ತ ವಿಧಳನಾ ಘಟಕವನ್ನು ತೆರೆಯಲಾಗಿದೆ. ಪ್ರತೀ ವ್ಯಕ್ತಿಯಲ್ಲಿಯೂ 350 ಮಿ.ಲೀ ನಿಂದ 450 ಮಿ.ಲೀನ ವರೆಗೆ ರಕ್ತವನ್ನು ಅದೇ ಸಂಗ್ರಹ ಸಾಮಥ್ರ್ಯವಿರುವ 350 ಮಿ.ಲೀ, 450 ಮಿ.ಲೀ, ದ್ವಿಗುಣ, ತ್ರಿಗುಣ, ಕ್ವಾಟ್ರಬಲ್‍ನ ಸಾಮಥ್ರ್ಯವಿರುವ ರಕ್ತಚೀಲಗಳಲ್ಲಿ ಸಂಗ್ರಹಿಸಬಹುದಾಗಿದೆ. ರಕ್ತ ಸಂಗ್ರಹಣೆಯ ನಂತರ 5 ರಿಂದ 8 ಗಂಟೆಯ ಒಳಗೆ ರಕ್ತದಲ್ಲಿನ ವಿವಿಧ ಕಣಗಳನ್ನು/ಅಂಗಾಂಶಗಳನ್ನು ಬೇರ್ಪಡಿಸ ಬಹುದಾಗಿದೆ. ಅದಕ್ಕಾಗಿ ರಕ್ತ ವಿಧಳನಾ ಘಟಕದ ಕೋಣೆಯು ತಂಬಾ ಸೂಕ್ಷತೆಯಿಂದ, ಸ್ವಚ್ಚತೆಯಿಂದ ಹಾಗೂ ನಿಗದಿತ ಪ್ರಮಾಣದ ಹವಾನಿಯಂತ್ರಣದಿಂದ ಕೂಡಿರಬೇಕಾಗುತ್ತದೆ.

 

ರಕ್ತದಲ್ಲಿರುವ ಕಣಗಳು

ರಕ್ತ ಕಣಗಳ ಜೀವಿತಾವದಿ

ರಕ್ತ ಕಣಗಳ ಬಳಕೆ

ಕೆಂಪುರಕ್ತ ಕಣಗಳು

35 ರಿಂದ 42 ದಿನಗಳು

ತೀರ್ವವಾದ ಅಥವಾ ದೀರ್ಘಕಾಲದ ರಕ್ತ ಹೀನತೆಯಿಂದ ದೇಹದ ಅಂಗಾಂಶಗಳಲ್ಲಿ ಆಮ್ಲಜನಕೀಕರಣವು ದುರ್ಬಲಗೊಂಡಾಗ ಕೆಂಪುರಕ್ತ ಕಣಗಳನ್ನು ಪೂರೈಸುವ ಮುಖಾಂತರ ಇದರ ಸದಬಳಕೆ ಮಾಡಬಹುದಾಗಿದೆ

ಪ್ಲೇಟ್‍ಲೇಟ್‍ಗಳು

5 ದಿನಗಳು

ಮಾನವನ ದೇಹದಲ್ಲಿ ಪ್ಲೇಟ್‍ಲೇಟ್‍ಗಳ ಕೊರತೆಯಿಂದಾಗಿ ರಕ್ತವು ತೀವ್ರವಾಗಿ ಸ್ರಾವವಾಗುತ್ತಿದ್ದರೆ, ರಕ್ತದ ಕ್ಯಾನ್ಸರ್ ಇರುವ ರೋಗಿಗೆ ಕೀಮೊತೆರಪಿ, ಸ್ಟೇಮ್‍ಸೆಲ್ ಚಿಕಿತ್ಸೆ ಕೊಡಿಸುವ ಸಂದರ್ಭದಲ್ಲಿ, ಹಾಗೂ ಡೆಂಗ್ಯು ರೋಗ ಪೀಡಿತ ರೋಗಿಗಳಿಗೆ ಪ್ಲೇಟ್ ಲೇಟ್‍ಗಳನ್ನು ಪೂರೈಸಬಹುದಾಗಿದೆ.

ಪ್ಲಾಸ್ಮ

ಒಂದು ವರ್ಷ  

ಮಾನವನ ದೇಹದಲ್ಲಿ ರಕ್ತ ಸ್ರಾವದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಹೆಪ್ಪುಗಟ್ಟಲು ವಿಫಲವಾದಾಗ, ರಕ್ತದಲ್ಲಿ ರಕ್ತ ಪ್ರೋಟೀನ್‍ಗಳ ಕೊರತೆ ಕಂಡುಬಂದಾಗ, ದ್ರವ ವಿನಿಮಯ ಕೇಂದ್ರದಲ್ಲಿ ದ್ರಾವಣಕ್ಕೆ ಬದಲಾಗಿ ಪ್ಲಾಸ್ಮವನ್ನು ಬದಲೀ ದ್ರಾವಣವಾಗಿ ಬಳಸಬಹುದಾಗಿದೆ.                       

ಪ್ಲಾಸ್ಮ ಪ್ರಾಕ್ಷೆನೇಷನ್ ಬಕ್ಸ್ (ಕ್ರೈಯೊಪ್ರಿಸಿಪಿಟೆಟ್)

ಒಂದು ವರ್ಷ  

ಇದನ್ನು ಪ್ಲಾಸ್ಮಾದಿಂದ ಬೇರ್ಪಡಿಸಲಾಗುತ್ತದೆ ಇದು ಪೈಬ್ರಿನೋಜೆನ್, ವಾನ್ ವಿಲ್ಲೀಬ್ರಾಂಡ್ ಪ್ಯಾಕ್ಟರ್, ಪ್ಯಾಕ್ಟರ್ ಗಿII, ಪ್ಯಾಕ್ಟರ್ ಘಿIII, ಮತ್ತು ಪೈಬ್ರೋನೆಕ್ಸನ್ ಗಳನ್ನು ಒಳಗೊಂಡಿರುತ್ತದೆ. ಇದನ್ನು ರೋಗ ನಿರೋದಕ ಶಕ್ತಿಯಾಗಿ ಬಳಸಬಹುದಾಗಿದೆ.

 

ರಕ್ತ ಸಾಗಣಿಕ ವಾಹನಗಳು

 

ಪ್ರಸ್ತುತ ರಾಜ್ಯದಲ್ಲಿರುವ 43 ಸರ್ಕಾರಿ ರಕ್ತನಿಧಿ ಕೇಂದ್ರಗಳಿಂದ ಬೇಡಿಕೆಯಿರುವ ರಕ್ತ ಶೇಖರಣಾ ಘಟಕಗಳಿಗೆ ಹಾಗೂ ರಕ್ತದಾನ ಶಿಬಿರಗಳಿಂದ ರಕ್ತನಿಧಿ ಕೇಂದ್ರಗಳಿಗೆ ರಕ್ತವನ್ನು ಸಾಗಿಸಲು ಅಥವ ಬೇಡಿಕೆಯಿರುವ ಸ್ಥಳಗಳಿಗೆ ಪೂರೈಸಲು 19 ರಕ್ತಸಾಗಣಿಕಾ ವಾಹನಗಳನ್ನು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ (ರಕ್ತ ಸಾಗಣಿಕ ವಾಹನಗಳ ಪಟ್ಟಿ ಅಡಕದಲ್ಲಿ ಲಗತ್ತಿಸಲಾಗಿದೆ.)

 

ರಕ್ತ ಸಂಗ್ರಹಣೆ ಮತ್ತು ರಕ್ತ ಸಾಗಣಿಕ ವಾಹನಗಳು

 

ರಕ್ತದಾನ ಶಿಬಿರಗಳನ್ನು ನಡೆಸಲು, ರಕ್ತವನ್ನು ಶೇಖರಿಸಿಡುವ ಅತ್ಯಾಧುನಿಕ ತಾಂತ್ರಿಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ರಕ್ತವನ್ನು ಸಾಗಿಸುವಾಗ ರಕ್ತದ ಜೀವಿತಾವಧಿಯನ್ನು ಕಾಪಾಡುವ ನಿಗದಿತ ಹವಾನಿಯಂತ್ರಿತ ವಾಹನವನ್ನು ರಕ್ತ ಸಂಗ್ರಹಣೆ ಮತ್ತು ರಕ್ತ ಸಾಗಣಿಕ ವಾಹನಗಳಾಗಿ ಬಳಸಿಕೊಳ್ಳಲಾಗಿದೆ.

ಪ್ರಸ್ತುತ ರಾಜ್ಯದಲ್ಲಿರುವ 43 ಸರ್ಕಾರಿ ರಕ್ತನಿಧಿ ಕೇಂದ್ರಗಳಿಂದ ಬೇಡಿಕೆಯಿರುವ ರಕ್ತ ಶೇಖರಣಾ ಘಟಕಗಳಿಗೆ ಹಾಗೂ ರಕ್ತದಾನ ಶಿಬಿರಗಳಿಂದ ರಕ್ತನಿಧಿ ಕೇಂದ್ರಗಳಿಗೆ ರಕ್ತವನ್ನು ಸಾಗಿಸಲು ಅಥವ ಬೇಡಿಕೆಯಿರುವ ಸ್ಥಳಗಳಿಗೆ ಪೂರೈಸಲು ರಕ್ತಸಂಗ್ರಹಣೆ ಮತ್ತು ರಕ್ತಸಾಗಣಿಕಾ ವಾಹನಗಳನ್ನು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ .

 

ರಕ್ತಸಾಗಣಿಕ ಬಾರಿ ವಾಹನ

ಮೊಬೈಲ್ ರಕ್ತದಾನ ಶಿಬಿರ ನಡೆಸಲು, ರಕ್ತ ಸಂಗ್ರಹಣೆ ಮತ್ತು ರಕ್ತವನ್ನು ಒಂದುಕಡೆಯಿಂದ ಮತ್ತೋಂದು ಕಡೆಗೆ ಸಾಗಿಸಲು ಕೇಂದ್ರ ಸರ್ಕಾರವು (ನ್ಯಾಕೋ) 2013 ರಲ್ಲಿ ಒಂದು ರಕ್ತ ಸಾಗಣಿಕ ಬಾರಿ ವಾಹನವನ್ನು ಒದಗಿಸಿದೆ ಪ್ರಸ್ತುತ ಇದು ರಾಜ್ಯದ ಉತ್ತರ ಭಾಗದ ಜನರಿಗೆ ರಕ್ತದ ಹೆಚ್ಚಿನ ಅವಶ್ಯಕತೆಯಿರುವುದರಿಂದ ಈ ಕೊರತೆಯನ್ನು ನೀಗಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಗಿದೆ.

 

ರಕ್ತದಾನ

ರಕ್ತಕ್ಕೆ ಇನ್ನೋಂದು ಪರ್ಯಾಯ ವ್ಯವಸ್ಥೆ ಅಥವ ಮಾರ್ಗವಿರುವುದಿಲ್ಲ, ಎಲ್ಲಾ ರೀತಿಯ ವೈದ್ಯಕೀಯ ಹಾಗೂ ವೈಜ್ಞಾನಿಕ ಪ್ರಯೋಗಗಳಿಂದಲೂ ಪರ್ಯಾಯ ರಕ್ತವನ್ನು ಕಂಡುಹಿಡಿಯಲು ಅಥವ ರಕ್ತದ ನಕಲು ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಮಾನವನ ದೇಹದಿಂದ ಮಾತ್ರ ಉತ್ಪಾದಿಸಲ್ಪಡುತ್ತದೆ. ಆದ್ದರಿಂದ ಒಬ್ಬ ಮನುಷ್ಯ ಇನ್ನೋಬ್ಬ ಮನುಷ್ಯನಿಗೆ ರಕ್ತವನ್ನು ಧಾನ ಮಾಡುವುದರಿಂದ ಮಾತ್ರ ರಕ್ತದ ಕೊರತೆಯನ್ನು ನೀಗಿಸಿ ಹಾಗೂ ರಕ್ತದ ಅವಶ್ಯವಿರುವ ವ್ಯಕ್ತಿಯ ಪ್ರಾಣವನ್ನು ಕಾಪಾಡ ಬಹುದಾಗಿದೆ.

 

ಯಾರು ರಕ್ತವನ್ನು ಧಾನ ಮಾಡಬಹುದು.

ಉತ್ತಮ ಆರೋಗ್ಯವನ್ನು ಹೊಂದಿರುವಂತಹ, ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಒಪ್ಪಿರುವಂತಹ ಈ ಕೆಳಕಂಡ ಅರ್ಹತೆಯನ್ನು ಹೊಂದಿರುವ ವ್ಯಕ್ತಿಯು ರಕ್ತವನ್ನು ಧಾನ ಮಾಡಬಹುದಾಗಿದೆ.

1)           ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟು 65 ವರ್ಷ ಒಳಪಟ್ಟಿರುವ ಆರೋಗ್ಯಂತ ವ್ಯಕ್ತಿ.

2)           ರಕ್ತಧಾನಿಯ ದೇಹದಲ್ಲಿ ಹಿಮೋಗ್ಲೋಬಿನ್‍ನ ಪ್ರಮಾಣವು ಕನಿಷ್ಠ 12.5% ಗ್ರಾಂ/ಡಿಎಲ್ ಕಿಂತ ಹೆಚ್ಚಿರಬೇಕು.

3)           ನಾಡಿಮಿಡಿತವು ನಿಮಿಷಕ್ಕೆ ಕನಿಷ್ಠ 50 ರಿಂದ 100 ರವರೆಗೆ ತನ್ನ ಬಡಿತವನ್ನು ಹೊಂದಿರಬೇಕು ಹಾಗೂ ಇದರಲ್ಲಿ       ಏರಿಳಿತಗಳು ಇರಬಾರದು.

4)           ದೇಹದ ರಕ್ತದ ಒತ್ತಡವು ಸಿಸ್ಟೋಲಿಕ್ 100-180 ಎಂಎಂಹೆಚ್‍ಜಿ ಮತ್ತು ಡಯಸ್ಟೋಲಿಕ್ 50-100 ಎಂಎಂಹೆಚ್‍ಜಿ ಇರಬೇಕು.

5)           ದೇಹದ ತಾಪಮಾನವು - ಸಾಮಾನ್ಯವಾಗಿರಬೇಕು (ಮೌಖಿಕ ತಾಪಮಾನವು 37.5ಛಿ ಹೆಚ್ಚಾಗಿರಬಾರದು)

6)           ದೇಹದ ತೂಕವು 45 ಕೆ.ಜಿ ಗಿಂತ ಕಡಿಮೆ ಇರಬಾರದು.

7)           ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯವಂತ ವ್ಯಕ್ತಿಯಾಗಿರಬೇಕು ಹಾಗೂ ಯಾವುದೇ ದೀರ್ಘಾವಧಿಯ ಖಾಯಿಲೆಯಿಂದ ಬಳಲುತ್ತಿರಬಾರದು ಉದಾ : ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮುಂತಾದವುಗಳು)

 

ರಾಜ್ಯದಲ್ಲಿ ರಕ್ತದ ಅವಶ್ಯಕತೆ :

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಯಂತೆ ಆಯಾ ಪ್ರದೇಶದ, ರಾಜ್ಯದ, ದೇಶದ ಒಟ್ಟು ಜನ ಸಂಖ್ಯೆಯ ಶೇಖಡ 1% ರಕ್ತದ ಅವಶ್ಯಕತೆಯಿರುತ್ತದೆ. ನಮ್ಮ ರಾಜ್ಯಕ್ಕೆ 2020-21 ರ ರಕ್ತದ ಅವಶ್ಯಕತೆಯು 808592 ಯುನಿಟ್‍ಗಳು.

ರಾಜ್ಯದಲ್ಲಿ ಕಳೆದ 8 ಆರ್ಥಿಕ ಸಾಲಿನ ವರ್ಷಗಳಾದ 2012-13 ರಿಂದ 2019-20 ರವರೆಗಿನ ರಕ್ತದ ಗುರಿ ಹಾಗೂ ಅದರ ಸಂಗ್ರಹಣೆಯ ವಿವರ ಈ ಕೆಳಕಂಡಂತಿದೆ.

 

ಕ್ರಮ ಸಂಖ್ಯೆ

ಆರ್ಥಿಕ ಸಾಲು

ವಾರ್ಷಿಕ ಗುರಿ

ಒಟ್ಟು ರಕ್ತ ಸಂಗ್ರಹಣೆ

ಒಟ್ಟು ರಕ್ತ ಸಂಗ್ರಹಣೆಯ ಶೇಕಡವಾರು

ಸ್ವಯಂ ಪ್ರೇರಿತ ರಕ್ತದಾನ

ಸ್ವಯಂ ಪ್ರೇರಿತ ರಕ್ತದಾನದ ಶೇಕಡವಾರು

1

2012-2013

3,79,134

6,60,138

174

4,35,258

66

2

2013-2014

4,21,260

6,94,151

165

4,08,974

59

3

2014-2015

4,68,067

7,54,485

161

5,19,260

69

4

2015-2016

5,20,074

7,46,716

144

5,39,878

72

5

2016-2017

5,77,860

7,87,330

136

5,93,108

75

6

2017-2018

6,42,067

8,44,419

132

6,57,612

78

7

2018-2019

7,13,408

8,56,215

120

7,38,263

86

8

2019-2020

7,92,675

8,77,654

111

7,66,860

87

ಇತ್ತೀಚಿನ ನವೀಕರಣ​ : 11-09-2020 01:17 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080