ಅಭಿಪ್ರಾಯ / ಸಲಹೆಗಳು

ಭಾಹ್ಯ ಗುಣಮಟ್ಟ ಭರವಸೆಯ ಯೋಜನೆ

ಭಾಹ್ಯ ಗುಣಮಟ್ಟ ಭರವಸೆಯ ಯೋಜನೆ

 

ಭಾಹ್ಯ ಗುಣಮಟ್ಟ ಭರವಸೆಯ ಯೋಜನೆ ಎಂಬುದು ಪ್ರಾವಿಣ್ಯತೆಯನ್ನು ಅಥವಾ ಪರೀಕ್ಷಾ ಗುಣಮಟ್ಟವನ್ನು ಎತ್ತಿ ತೋರಿಸುವ ಪರೀಕ್ಷೆಯಾಗಿದೆ. ಸದರಿ ಪರೀಕ್ಷೆಯನ್ನು ವರ್ಷದಲ್ಲಿ ಜನವರಿ ಮತ್ತು ಜುಲೈ ಮಾಹೆಯಲ್ಲಿ ಎರಡು ಬಾರಿ ಮಾಡಲಾಗುತ್ತದೆ.

 

ಈ ಯೋಜನೆಯ ಅಡಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವಾದ ನಿಮ್ಹಾನ್ಸ್, ಬೆಂಗಳೂರು ಇಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇತರೇ 8 ಪ್ರಯೋಗಾಲಯದ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ, ಸದರಿ ಕಾರ್ಯಾಗಾರದಲ್ಲಿ ವಿತರಿಸಿದ 8 ಗುರುತಿಸಿ ಪರಿಕ್ಷಿಸಿದ ಮಾದರಿಯನ್ನು (ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವ ಮಾದರಿ) ಹಾಗೂ 4 ಗುರುತಿಸಿ ಬೃಹತ್ ಮಾದರಿಯಲ್ಲಿ ಪರಿಕ್ಷಿಸಿದ (ಆಪ್ತಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೇಂದ್ರಗಳಿಗೆ ವಿತರಿಸಲಾದ) ಪ್ರತೀ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯದ ಪರೀಕ್ಷಾ ಮಾದರಿಗಳು.

 

ಗುರುತಿಸಿದ ಪರೀಕ್ಷಾ ಮಾದರಿಗಳನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಹಾಗೂ ನಿಯಮಗಳಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ವರದಿಗಳನ್ನು ಪರೀಕ್ಷಿಸಿದ 7 ದಿನದೊಳಗಾಗಿ ನಿಗದಿತ ನಮೂನೆಯಲ್ಲಿ/ಸ್ವರೂಪದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ನಂತರ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ಸದರಿ ಪರೀಕ್ಷೆಯ ಪ್ರಾವಿಣ್ಯತಾ ವರದಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳಿಸುತ್ತದೆ.

 

ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ತನಗೆ ಹೊಂದಿಕೊಂಡಿರುವ ಎಲ್ಲಾ ಆಪ್ತಸಮಾಲೋಚನಾ ಕೇಂದ್ರ ಹಾಗೂ ರಕ್ತನಿಧಿ ಕೇಂದ್ರಗಳಿಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಡುತ್ತದೆ. 4ಗುರುತಿಸಿ ಬೃಹತ್‍ಮಾದರಿಯಲ್ಲಿ ಪರಿಕ್ಷಿಸಿದ ಮಾದರಿಯನ್ನು ಪ್ರತೀ ಆಪ್ತಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೇಂದ್ರಗಳಿಗೆ ರವಾನಿಸುತ್ತಾ ಫಲಕ ಮಾದರಿಯ ಪರೀಕ್ಷೆಯನ್ನು ನಡೆಸಿ ವರದಿಯನ್ನು ಪರೀಕ್ಷೆನಡೆಸಿದ 7ದಿನದೊಳಗಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ನಿಗದಿತ ನಮೂನೆಯಲ್ಲಿ ಕಳುಹಿಸಬೇಕು ಎಂದು ಸೂಚನೆಯನ್ನು ನೀಡುತ್ತದೆ.

 

ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ತನಗೆ ಹೊಂದಿಕೊಂಡಿರುವ ಎಲ್ಲಾ ಆಪ್ತಸಮಾಲೋಚನಾ ಕೇಂದ್ರ ಹಾಗೂ ರಕ್ತನಿಧಿ ಕೇಂದ್ರಗಳಿಂದ ಸಂಗ್ರಹಿಸಿದ ಪರೀಕ್ಷಾ ವರದಿಗಳನ್ನು  ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತದೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯದ ವರದಿಗಳನ್ನು ಪರಿಶೀಲಿಸಿ ಒಟ್ಟುಗೂಡಿ ಸಂಕಲಿಸಿದ ವರದಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತದೆ.

 

ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ಪ್ರಾವಿಣ್ಯತೆ ಅಥವಾ ಪರೀಕ್ಷಾ ಗುಣಮಟ್ಟವನ್ನು ಎತ್ತಿ ತೋರಿಸುವ ಪರೀಕ್ಷಾವರದಿಯನ್ನು ಸಿದ್ದಪಡಿಸಿ ತನಗೆ ಹೊಂದಿಸಲಾಗದ ಪ್ರತೀ ಆಪ್ತ ಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೆಂದ್ರಗಳಿಗೆ ಕಳುಹಿಸುತ್ತದೆ.

 

 

 

ವ್ಯತಿರಿಕ್ತ (ಹಿಮ್ಮುಖ) ಹರಿವಿನ ಮಾದರಿಯ ಕಾರ್ಯಕ್ರಮಗಳು.

ಇದು ಒಂದು ಭಾಹ್ಯ ಗುಣಮಟ್ಟ ಭರವಸೆಯ ಯೋಜನೆಯು ದಿನಂಪ್ರತಿ ದಾಖಲೆಯ ಘಟನಾವರದಿಯಾಗಿದೆ. ಯಾವ ಆಪ್ತ ಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೆಂದ್ರಗಳು ತಾವು ಸಂಗ್ರಹಿಸಿದ ಪ್ರತೀ ತ್ರೈಮಾಸಿಕ ಮೊದಲನೆ ಮಾಹೆಯ ಮೊದಲನೆ ವಾರದಲ್ಲಿ ಅಂದರೆ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್‍ನಲ್ಲಿ ಸಂಗ್ರಹಿಸಿದ ಒಟ್ಟು ಪರೀಕ್ಷಾ ಮಾದರಿಯ ಶೇಕಡ 20% ಧನಾತ್ಮಕ ಮತ್ತು ಶೇಕಡ 5%ರಷ್ಟು ಋಣಾತ್ಮಕ ಪರೀಕ್ಷಾಮಾದರಿಗಳನ್ನು ಪ್ರತೀ ತ್ರೈಮಾಸಿಕ ಮಾಹೆಯ ಎರಡನೇ ವಾರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಗಳಿಗೆ ಕಳುಹಿಸುತ್ತವೆ. ಸದರಿ ಪರೀಕ್ಷಾ ಮಾದರಿಗಳನ್ನು ಪರೀಕ್ಷಿಸಿದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ಒಂದುವಾರದೊಳಗಾಗಿ ಪುನಃ ಆಪ್ತಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೆಂದ್ರಗಳಿಗೆ ವರದಿಯನ್ನು ರವಾನಿಸಬೇಕಾಗುತ್ತದೆ.

 

ತ್ರೈಮಾಸಿಕ ಮೊದಲನೆ ಮಾಹೆ                             

ಮೊದಲನೆ ವಾರ

ಎರಡನೆ ವಾರ

ಮೂರನೇ ವಾರ

ನಾಲ್ಕನೇ ವಾರ

ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್

ಆಪ್ತಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೆಂದ್ರಗಳು ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸುತ್ತವೆ

ಸಂಗ್ರಹಿಸಿದ ಪರೀಕ್ಷಾ ಮಾದರಿಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವಪ್ರಯೋಗಾಲಯಗಳಿಗೆ ರವಾನಿಸ ಬೇಕಾಗುತ್ತದೆ.

ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ತಾನು ಪರೀಕ್ಷಿಸಿದ ಪರೀಕ್ಷಾ ಮಾದರಿ ಮತ್ತು  ವರದಿಗಳನ್ನು 7ದಿನಗಳೊಳಗಾಗಿ ಆಪ್ತಸಮಾಲೋಚನಾ ಕೇಂದ್ರ ಮತ್ತು ರಕ್ತನಿಧಿ ಕೆಂದ್ರಗಳಿಗೆ ಹಿಂತಿರುಗಿಸಬೇಕಾಗುತ್ತದೆ.

ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯವು ತಾನು ಪರೀಕ್ಷಿಸಿದ ಒಟ್ಟು ಪರೀಕ್ಷೆಯ ಶೇಕಡ 20% ಧನಾತ್ಮಕ ಮತ್ತು ಶೇಕಡ 5% ಋಣಾತ್ಮಕ ಪರೀಕ್ಷಾ ಮಾದರಿ ಮತ್ತು  ವರದಿಗಳನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕಾಗುತ್ತ

 

ಇತ್ತೀಚಿನ ನವೀಕರಣ​ : 01-10-2020 01:03 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080