ಅಭಿಪ್ರಾಯ / ಸಲಹೆಗಳು

ಮಾಹಿತಿ ಶಿಕ್ಷಣ ಮತ್ತು ಸಂವಹನ

   ಕೆಸಾಪ್ಸ್‍ನ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗವು ರಾಜ್ಯದ್ಯಾಂತ ಹೆಚ್‍ಐವಿ/ಏಡ್ಸ್ ಕುರಿತಾಗಿ  ಜಾಗೃತಿ ಮೂಡಿಸಲು ಮತ್ತು ಅದರ ಬಗ್ಗೆ ಮಾಹಿತಿಯನ್ನು ಪಸರಿಸಲು ಶ್ರಮಿಸುತ್ತಿದೆ.  ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗದ ಕಾರ್ಯತಂತ್ರಗಳು ಹೆಚ್‍ಐವಿ/ಏಡ್ಸ್ ಸೋಂಕಿನ ತಡೆ ಮತ್ತು ನಿರ್ಮೂಲನೆ ಪೂರಕವಾದ ಮತ್ತು ಬೆಂಬಲಿತ ವಾತಾವರಣವನ್ನು ಸೃಷ್ಠಿಸುವ ಮತ್ತು ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಯುವ ಜನತೆ ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸಿ, ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಸುರಕ್ಷಿತ ಲೈಂಗಿಕ ನಡವಳಿಕೆಯನ್ನು ಅಳವಡಿಸಿಕೊಳ್ಳುವಲ್ಲಿ ಸೂಕ್ತವಾದ ನಿರ್ಧಾರಗಳನ್ನು ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿದೆ.  ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಸಾಮಾನ್ಯ ಜನರಲ್ಲಿರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ, ಹೆಚ್‍ಐವಿ ಸೋಂಕಿನೊಂದಿಗೆ ಬದುಕುತ್ತಿರುವವರನ್ನು ಕಳಂಕಿತರನ್ನಾಗಿ ಮತ್ತು ತಾರತಮ್ಯತೆಯಿಂದ ನೋಡುವ ಮನೋಭಾವನೆಯನ್ನು ಹೋಗಲಾಡಿಸುವ ಉದ್ದೇಶವನ್ನು ಹೊಂದಿದೆ. ಹೆಚ್‍ಐವಿ/ಏಡ್ಸ್ ನಿರ್ಮೂಲನೆಗೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಸಾಮಾಜಿಕ ಮತ್ತು ಸಾಂಸ್ಕøತಿಕ ವಿಷಯಗಳೊಂದಿಗೆ ವ್ಯವಹರಿಸುವ ಗುರಿಯನ್ನು ಹೊಂದಿದೆ. 

 

   ಸಂವಹನದ ಸಾಧನಗಳು ಮತ್ತು ವಿಧಾನಗಳಾದ ವರ್ತನೆಯಲ್ಲಿ ಬದಲಾವಣೆ, ಐಪಿಸಿ, ಸಾಂಪ್ರದಾಯಿಕ  ಮತ್ತು  ಜಾನಪದ ಮಾಧ್ಯಮಗಳು, ಹೋರ್ಡಿಂಗ್‍ಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹೆಚ್‍ಐವಿ/ಏಡ್ಸ್ ತಡೆ, ಲಭ್ಯವಿರುವ ಸೇವೆಗಳು, ಆರೈಕೆ ಮತ್ತು ಬೆಂಬಲ ಹಾಗೂ ಕಳಂಕ ತಾgತಮ್ಯತೆಯ ನಿರ್ಮೂನೆಗೆ ಸಂಬಂಧಿಸಿದ ಸಂದೇಶಗಳು ಯುವ ಜನತೆ, ಮಹಿಳೆಯರು ಒಳಗೊಂಡಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತವೆ. ಮಾತ್ರವಲ್ಲ ಈ ಬಗ್ಗೆ ಜ್ಞಾನವನ್ನು ಹೆಚ್ಚಿಸಿ ಹೆಚ್‍ಐವಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೂಡ ಉತ್ತೇಜಿಸುತ್ತದೆ.  ಜನ ಸಾಮಾನ್ಯರಲ್ಲಿ ಹಾಗೂ ವಲಸಿಗರು ಹಾಗೂ ಆಗ್ಗಾಗ್ಗೆ ಪ್ರಯಾಣಿಸುವರು, ವೃತ್ತಿ ಆಧರಿತ ಪ್ರಯಾಣಿಸುವವರಲ್ಲಿ ಸುರಕ್ಷಿತ ಲೈಂಗಿಕ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತದೆ. ಜೊತೆಗೆ ಎಸ್‍ಟಿಡಿ ಮತ್ತು ಟಿಬಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆಯೂ ಅರಿವು ಮೂಡಿಸುತ್ತದೆ.

 

ಮಾಹಿತಿ, ಶಿಕ್ಷಣ ಮತ್ತು ಸಂವಹನದ ಎಲ್ಲಾ ಚಟುವಟಿಕೆಗಳು ಸಮೂಹ ಸಂವಹನ, ಅನೌಪಚಾರಿಕ ಸಂವಹನ ಮಾಧ್ಯಮಗಳು ಮತ್ತು ವ್ಯಕ್ತಿ-ವ್ಯಕ್ತಿ ನಡುವಿನ ಸಂವಹನದ ಸಾಧನಗಳ ಮೂಲಕ ಹೆಚ್‍ಐವಿ/ಏಡ್ಸ್ ಕುರಿತಾದ ಮಾಹಿತಿ ಜನಸಾಮಾನ್ಯರು ಸೇರಿದಂತೆ ಯುವ ಜನಾಂಗ, ಗ್ರಾಮೀಣ ಸಮುದಾಯ ಮತ್ತು ಆದಿವಾಸಿಗಳನ್ನು ತಲುಪುತ್ತಿದೆ. ಈ ವಿಭಾಗದ ಚಟುವಟಿಕೆಗಳು ಸಮಗ್ರವಾಗಿದ್ದು, ಕೆಸಾಪ್ಸ್‍ನ ಇನ್ನಿತರ ವಿಭಾಗಗಳಾದ ಪೋಷಕರಿಂದ ಮಗುವಿಗೆ ಸೋಂಕಿನ ವರ್ಗಾವಣೆಯ ತಡೆ, ರಕ್ತ ಸುರಕ್ಷತೆ, ಅಪ್ತಸಮಾಲೋಚನೆ, ಆರೈಕೆ ಮತ್ತು ಬೆಂಬಲ, ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಕ್ಷಯ, ಕಾಂಡೋಮ್‍ಗಳ ಬಳಕೆಯ ಉತ್ತೇಜನ, ವಲಸಿಗರಲ್ಲಿ ಅರಿವು ಮೂಡಿಸುವಿಕೆ, , ಕಳಂಕ ತರತಮ್ಯ, ಸಾಮಾಜಿಕ ಸವಲತ್ತುಗಳು, ಉಚಿತ ಸಹಾಯವಾಣಿ ಮತ್ತು ಹೆಚ್ಐವಿ ಮತ್ತು ಏಡ್ಸ್ (ನಿಯಂತ್ರಣ ಮತ್ತು ತಡೆ) ಕಾಯ್ದೆ 2017 ರ ಬಗ್ಗೆ ಮೊದಲಾದವುಗಳನ್ನು ಒಳಗೊಂಡಿದೆ.  ಈ ಸಂದೇಶಗಳು ಮತ್ತು ಮಾಹಿತಿಗಳು ಜಾಗೃತಿಯನ್ನು ಮೂಡಿಸುವುದರೊಂದಿಗೆ ಸಾಮಾಜಿಕ ಸಂಘಟನೆಗೂ ಪೂರಕವಾಗಿವೆ.

 

ಈ ಕೆಳಕಂಡ ಮಾದ್ಯಮಗಳ ಮೂಲಕ ಹೆಚ್‍ಐವಿ/ಏಡ್ಸ್ ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

 

ದೂರದರ್ಶನ:

 

ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹೆಚ್‍ಐವಿ/ಏಡ್ಸ್ ಗೆ ಮಾಹಿತಿ ನೀಡಲು ದೂರದರ್ಶನದ ಮೂಲಕ ಪ್ರಸಾರ ಮಾಡಲಾಗುತ್ತಿದೆ.  ವಿಶೇಷ ದಿನಗಳಾದ ವಿಶ್ವ ಏಡ್ಸ್ ದಿನ, ಅಂತಾರಾಷ್ಟ್ರೀಯ ಯುವ ದಿನಚಾರಣೆ, ಸ್ವಯಂ ಪ್ರೇರಿತ ರಕ್ತದಾನ ದಿನಚಾರಣೆ, ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಗಳಂದು ದೂರದರ್ಶನ ಹಾಗೂ ಖಾಸಗಿ ಟಿವಿ ಚಾನಲ್ಸ್ ಮೂಲಕ ಹೆಚ್‍ಐವಿ/ಏಡ್ಸ್ ನಿಯಂತ್ರಣ ಕುರಿತು ಸ್ಟಾಟ್ಸ್, ಫೋನ್ ಇನ್ ಕಾರ್ಯಕ್ರಮ, ಚರ್ಚೆ, ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. 

 

ರೆಡಿಯೋ ಕಾರ್ಯಕ್ರಮ:

 

ರೆಡಿಯೋ ಎಲ್ಲಾ ಪ್ರದೇಶಗಳಲ್ಲಿಯೋ ವ್ಯಾಪಕವಾಗಿರುವುದರಿಂದ ಇದರ ಮೂಲಕ ವಲಸೆಗಾರರಿಗೆ, ಕೃಷಿ ಕುಟುಂಬ, ವಿದ್ಯಾರ್ಥಿಗಳಿಗೆ, ಯುವಕ ಯುವತಿಯರು ಒಳಗೊಂಡಂತೆ ಎಲ್ಲರಿಗೂ ಹೆಚ್‍ಐವಿ/ಏಡ್ಸ್ ಕುರಿತು ಆಕಾಶವಾಣಿ ಹಾಗೂ ಖಾಸಗಿ ರೆಡಿಯೋ ಚಾನಲ್‍ಗಳ ಮೂಲಕ ಅರಿವು ಮೂಡಿಲಾಗುವುದು.

ವಿಶೇಷ ದಿನಗಳಾದ ವಿಶ್ವ ಏಡ್ಸ್ ದಿನ, ಅಂತಾರಾಷ್ಟ್ರೀಯ ಯುವ ದಿನಚಾರಣೆ, ಸ್ವಯಂ ಪ್ರೇರಿತ ರಕ್ತದಾನ ದಿನಚಾರಣೆ, ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಗಳಂದು ಸದರಿ ದಿನದ ಮಹತ್ವದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. 

 

ಮುದ್ರಣ ಐಇಸಿ ಸಮಗ್ರಿಗಳು:

 

ಹೆಚ್‍ಐವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳ, ಇತ್ಯಾದಿಗಳ ಬಗ್ಗೆ ಕರಪತ್ರ, ಮಡಿಕೆ ಪತ್ರ, ಪೋಸ್ಟರ್ಸ್, ಕೈಪಿಡಿ ಪುಸ್ತಕ, ಫ್ಲಿಪ್ ಪುಸ್ತಕ, ಇತ್ಯದಿಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ತಲುಪುವಂತೆ ಎಲ್ಲಾ ಡ್ಯಾಪ್ಕೋಗಳಲ್ಲಿ ಮುದ್ರಿಸಿ ಸರಬರಾಜು ಮಾಡಲಾಗುವುದು.  

                               

ಹೋರ್ಡಿಂಗ್ಸ್:

 

ಹೆಚ್‍ಐವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳ, ಹೆಚ್‍ಐವಿ/ಏಡ್ಸ್ ಕುರಿತು ಮಾಹಿತಿಯುಳ್ಳ ಪ್ಲೆಕ್ಸ್‍ಗಳನ್ನು ಮುದ್ರಿಸಿ ರಾಜ್ಯಾದಾದ್ಯಂತ ಲಭ್ಯವಿರುವ ಹೋರ್ಡಿಂಗ್ಸ್ ಗಳ ಮೇಲೆ ಅಂಟಿಸಲಾಗುವುದು.   

 

ಹೊರಾಂಗಣ ಮಾದ್ಯಮಗಳ ಮೂಲಕ ಹೆಚ್‍ಐವಿ/ಏಡ್ಸ್ ಕುರಿತು ಅರಿವು ಮೂಡಿಸುವುದು:

 

 • ರೆಲ್ವೇ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರು ಎಲ್.ಸಿ.ಡಿ ಪೊರದೆಯ ಮೂಲಕ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಸಾರುವ ಜಾಹೀರಾತನ್ನು ಪ್ರಸಾರ ಮಾಡಲಾಗುವುದು.
 • ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ಸುಗಳ ಒಳಗೂ ಹಾಗೂ ಹೊರಗೂ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಮುದ್ರಿಸಿ ಬ್ರಾಂಡ್ ಮಾಡಲಾಗಾವುದು.
 • ಸಿನಿಮಾ ಮಂದಿರಗಳಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಸಾರುವ ಜಾಹೀರಾ ತನ್ನು ಪ್ರಸಾರ ಮಾಡಲಾಗುವುದು. 

 

ಜಾನಪದ ಕಲಾ ಪದರ್ಶನಗಳ ಮೂಲಕ ಅರಿವು ಮೂಡಿಸುವುದು:

 

ಹಳ್ಳಿ ಹಳ್ಳಿಗಳಲ್ಲಿಯು ಹೆಚ್‍ಐವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲು ವಿವಿಧ ಜಾನಪದ ಕಲಾ ಪ್ರಾಕಾರಗಳ ಅಂದರೆ ಕಂಸಾಲೆ, ಡೊಳ್ಳು ಕುಣಿತ, ವೀರಗಾಸೆ, ಗೀಗೀ ಪದ ತಂಡಗಳಿಗೆ ತರಬೇತಿ/ಕಾರ್ಯಗಾರವನ್ನು ಹಮ್ಮಿಕೊಂಡು ಅವರ ಮೂಲಕ ಎಲ್ಲಾ ಹಂತದ ಜನರಿಗೆ ಜಾನಪದ ಕಲಾ ಪ್ರರ್ದಶನಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. 

 

ಮೆನೆ ಮನೆ ಮಾಹಿತಿ ಅಭಿಯಾನ:

 

ಮನೆ ಮನೆ ಮಾಹಿತಿ ಅಭಿಯಾನದ ಮೂಲಕ ಪ್ರತಿಯೊಬ್ಬರಿಗೂ ಹೆಚ್‍ಐವಿ/ಏಡ್ಸ್ ಗೆ ಅರಿವು ಮೂಡಿಸುವ ಒಂದು ಅಭಿಯಾನವಾಗಿದೆ.  ಈ ಅಭಿಯಾನದಲ್ಲಿ ಆಶಾ ಕಾರ್ಯಕರ್ತರು, ಎನ್‍ಜಿಒ, ಅಂಗನವಾಡಿ ಕಾರ್ಯಕರ್ತರ ಮೂಲಕ ಪ್ರತಿಯೊಂದು ಮನೆಗೆ ಬೇಟಿ ಮಾಡಿ ಅಲ್ಲಿನ ಎಲ್ಲಾ ಸದಸ್ಯರಿಗೂ ಹೆಚ್‍ಐವಿ/ಏಡ್ಸ್ ಕುರಿತು ಮಾಹಿತಿಯನ್ನು ಕೊಡಲಾಗುವುದು.  ಹಾಗೂ ಇದರ ಜೊತೆಗೆ ವಿವಿಧ ಮಾಧ್ಯಮಗಳ ಮೂಲಕ ಅಂದರೆ ಟಿವಿ, ರೆಡಿಯೋ, ದಿನಪತ್ರಿಕೆ, ಹೋಡಿಂಗ್ಸ್, ಜಾನಪದ ಕಲಾ ಪ್ರದರ್ಶನಗಳ ಮೂಲಕ ಅರಿವು ಮೂಡಿಸಲಾಗುವುದು.  ಇದರಿಂದ ಪ್ರತಿಯೊಬ್ಬರಿಗೆ ಹೆಚ್‍ಐವಿ ಬಗ್ಗೆ ಅರಿವು ಇರುತ್ತದೆ. 

 

ವಿಶ್ವ ಏಡ್ಸ್ ದಿನ:

 

ಪ್ರತಿ ವರ್ಷ ಡಿಸೆಂಬರ್ 1 ರಂದು “ವಿಶ್ವ ಏಡ್ಸ್ ದಿನ”ವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು.  ಏಡ್ಸ್ ನಿಂದ ಮರಣ ಹೊಂದವರ ನೆನಪಿಗಾಗಿ “ವಿಶ್ವ ಏಡ್ಸ್ ದಿನ”ವನ್ನು ಏರ್ಪಡಿಸಲಾಗುವುದು.  ಅಂದು ಹೆಚ್‍ಐವಿ/ಏಡ್ಸ್ ಬಗ್ಗೆ ಜನ ಸಮಾನ್ಯರಿಗೆ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುವುದು.

 

ಮುಖ್ಯವಾಹಿನಿ ತರಬೇತಿ:

 • ಜಂಟೀ ಕಾರ್ಯಕಾರಿ ಸಭೆ: ಕನಾ ಟಕ ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿಯು, ರಾಜ್ಯದಾದ್ಯಂತ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಪ್ರತಿ 6 ತಿಂಗಳಿಗೊಮ್ಮೆ ಯೋಜನಾ ನಿರ್ವದೇಶಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಹೆಚ್ಐವಿ/ಏಡ್ಸ್ ಗೆ ಸಂಬಂಧಿಸಿದ ಮುಂದಾಳತ್ವವಹಿಸಿ ತಮ್ಮ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳನ್ನು ತರಬೇತಿಗೊಳಿಸಿ ಅವರಿಂದ ಅವರವರ ಕುಟುಂಬ ಸದಸ್ಯರೊಂದಿಗೆ ಹೆಚ್ಐವಿ/ಏಡ್ಸ್ ವಿಚಾರವನ್ನು ಹಂಚಿಕೊಂಡು ಸೋಂಕು ಬಾರದ ಹಾಗೆ ಎಚ್ಚರ ವಹಿಸುವುದು ಹಾಗೂ ತಮ್ಮ ಸುತ್ತಾಮುತ್ತಲಿನಲ್ಲಿ ಸೋಂಕಿತರು ಕಂಡು ಬಂದರೆ ಅವರ ತಮ್ಮಿಂದಾಗುವ ಸಹಾಯ ಮಾಡುವಂತೆ ತಿಳಿಸುವುದು ಹಾಗೂ ಹೆಚ್ಐವಿ ಸೋಂಕು ಮುಕ್ತ ರಾಜ್ಯ ಮಾಡುವ   ಉದ್ದೇಶ ಈ ಸಭೆಯದಾಗಿರುತ್ತದೆ.

 

 • ಜಿಲ್ಲೆ ಮಟ್ಟದಲ್ಲಿ ನಡೆಯುವ ಮುಖ್ಯವಾಹಿನಿ ತರಬೇತಿಗಳು: ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿವ೵ಹಿಸುತ್ತಿರುವ ಆಪ್ತ ಸಮಾಲೋಚಕರ ಮೂಲಕ ಪ್ರತಿ ತಿಂಗಳು ಒಬ್ಬರು ಒಂದು ತರಬೇತಿಯಂತೆ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಆಯಾ ಇಲಾಖೆಯಡಿಯಲ್ಲಿ ನಡೆಸುವ ಸಭೆ ಅಥವಾ ತರಬೇತಿಗಳಲ್ಲಿ ಹೆಚ್ಐವಿ/ಏಡ್ಸ್ ಬಗ್ಗೆ ಮೂಲ ಮಾಹಿತಿ, ಜಿಲ್ಲೆಯಲ್ಲಿನ ಹೆಚ್ಐವಿ ಸೋಂಕಿನ ಸ್ಥಿತಿಗತಿ, ಕಳಂಕ ತರತಮ್ಯ, ಸಾಮಾಜಿಕ ಸವಲತ್ತುಗಳು, ಉಚಿತ ಸಹಾಯವಾಣಿ ಮತ್ತು ಹೆಚ್ಐವಿ ಮತ್ತು ಏಡ್ಸ್ (ನಿಯಂತ್ರಣ ಮತ್ತು ತಡೆ) ಕಾಯ್ದೆ 2017 ರ ಬಗ್ಗೆ ವಿವಾರವಾಗಿ ಮಾಹಿತಿ ನೀಡಿ ವರದಿಗಳನ್ನು ಕೆ.ಎಸ್.ಎ.ಪಿ.ಎಸ್ ನ ಐಇಸಿ ವಿಭಾಗಕ್ಕೆ ಸಲ್ಲಿಸಿ, ಈ ವರದಿಗಳನ್ನು ಕೃಢೀಕರಿಸಿ, ನಾಕೋಗೆ ಸಲ್ಲಿಸಲಾಗುವುದು.

 

ಕರ್ನಾಟಕ ಸರ್ಕಾರದಿಂದ ಹೆಚ್ಐವಿ ಸೊಂಕಿತ/ಬಾಧಿತರಿಗೆ ದೊರೆಯುತ್ತಿರುವ ಸೌಲಭ್ಯಗಳ ವಿವರ  ಜುಲೈ 2020 ರವರಗೆ:

                                            

ಕ್ರಮ ಸಂಖ್ಯೆ

ಯೋಜನೆಯ ಹೆಸರು

ದೊರಕುವ ಸೌಲಭ್ಯ

ಯಾರಿಗೆ

ಇಲಾಖೆಯ ಹಸರು

ಸೇವೆಗಳನ್ನು ಪಡೆದಿರುವ ಒಟ್ಟು ಸಂಖ್ಯೆ

1

ಅನ್ನ ಅಂತ್ಯೋದಯ ಪಡಿತರ ಚೀಟಿ

35,ಕೆಜಿ ದಾನ್ಯಗಳು

ಹೆಚ್‍ಐವಿ ಸೊಂಕಿತರಿಗೆ

ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ

36614

2

ಕಾಬಾ ಯೋಜನೆ

ರೂ.1000 ರವರಗೆ   

ಹೆಚ್‍ಐವಿ/ಸೊಂಕಿತ

ಮತ್ತು ಬಾಧಿತ ಮಕ್ಕಳಿಗೆ  

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

19724

3

ಉಚಿತ ವಸತಿ  ಯೋಜನೆ ಉಚಿತ ನಿವೇಶನ ಹೆಚ್‍ಐವಿ ಸೊಂಕಿತರಿಗೆ ರಾಜೀವ್‍ಗಾಂಧಿ ಗ್ರಾಮೀಣಾಭಿವೃದ್ಧಿ ನಿಗಮ

2709

 

4

ಮೈತ್ರಿ ಯೋಜನೆ

ರೂ.600 ಪೆನ್ಷನ್

ಲೈಂಗಿಕ ಅಲ್ಪಸಂಖ್ಯಾತರಿಗೆ

ಮಹಿಳಾಮತ್ತುಮಕ್ಕಳ ಅಭಿವೃದ್ಧಿ ನಿಗಮ           

2882

5

ಚೇತನ ಯೋಜನೆ

ರೂ.50000

ಲೈಂಗಿಕ ಕಾರ್ಯಕರ್ತರಿಗೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ

3144

6

ಖಾಸಗಿಶಾಲೆಗಳಲ್ಲಿ

ಉಚಿತ ನೊಂದಣಿ     

ಆರ್.ಟಿ.ಇ. ಅಡಿಯಲ್ಲಿ ಉಚಿತ ನೊಂದಣಿ                         

ಹೆಚ್‍ಐವಿ ಸೊಂಕಿತ/ಬಾಧಿತ ಮಕ್ಕಳಿಗೆ

ಪ್ರಾಥಮಿಕ ಶಿಕ್ಷಣ ಇಲಾಖೆ

692

7

ಉಚಿತ ಕಾಲೇಜು ಶಿಕ್ಷಣ

ಮತ್ತು ವಿಧ್ಯಾರ್ಥಿ ವೇತನ                                       

ಉಚಿತ ಕಾಲೇಜು ಶಿಕ್ಷಣ&ವಿಧ್ಯಾರ್ಥಿ ವೇತನ

ಹೆಚ್‍ಐವಿ ಸೊಂಕಿತ/ಬಾಧಿತ ವಿಧ್ಯಾರ್ಥಿಗಳಿಗೆ

ಕಾಲೇಜು ಶಿಕ್ಷಣ ಇಲಾಖೆ

300

8

ಉಚಿತ ಪರಿಕ್ಷೆಗಳು ಹಾಗೂ ಚಿಕಿತ್ಸೆ

                                   

ರಕ್ತ ಪರೀಕ್ಷೆ, ಎಕ್ಸರೇ,

ಸ್ಕ್ಯಾನಿಂಗ್ ಮುಂತಾದವು

ಹೆಚ್.ಐವಿ/ ಸೊಂಕಿತರಿಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

14491

9

ಧನ ಶ್ರೀ ಯೋಜನೆ                

ರೂ.50,000 ಬ್ಯಾಂಕ್ ಸಾಲ ಸಣ್ಣ ಉದ್ದಿಮೆಗಳಿಗೆ

ಹೆಚ್‍ಐವಿ ಸೊಂಕಿತ ಮಹಿಳೆಯರಿಗೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ   

2477

10

ಉಚಿತ ಕಾನೂನು    ಸೇವೆಗಳು                                    

ಉಚಿತ ಕಾನೂನು ಸೇವೆಗಳು

ಹೆಚ್‍ಐವಿ ಸೋಂಕಿತ/ ಬಾಧಿತರಿಗೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು

1108

11

ಉಚಿತ ಪ್ರಯಾಣ ಭತ್ಯೆ                                    

ಎರಡನೇ ಹಂತದ ಚಿಕಿತ್ಸೆಗೆ ಬರುವ ಎಲ್ಲಾ ಹೆಚ್‍ಐವಿ ಸೋಂಕಿತರಿಗೆ

ಹೆಚ್‍ಐವಿ ಸೊಂಕಿತರಿಗೆ

ಹೊಸ ಆದೇಶ

8224

12

ಮಾನಸ್ವಿನಿ ಯೋಜನೆ                         

45 ವರ್ಷಗಳವರಗೆ ಮದುವೆಯಾಗದೆ ಇರುವ ಮಹಿಳೆಯರಿಗೆ ಮಾಸಾಶನ

ಎಲ್ಲಾ ರೀತಿಯ ಮಹಿಳೆಯರಿಗೂ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ   

1333

 

 1. ಹೆಚ್ಐವಿ ಮತ್ತು ಏಡ್ಸ್ (ನಿಯಂತ್ರಣ ಮತ್ತು ತಡೆ) ಕಾಯ್ದೆ 2017:

 

   ಹೆಚ್‍ಐವಿ/ಏಡ್ಸ್ ಕಾಯ್ದೆ ಸ್ವರೂಪ:

 

ಎಚ್‍ಐವಿ/ಏಡ್ಸ್ ಕಾಯಿದೆಯು 23/03/2014 ರಲ್ಲಿ ರಾಜ್ಯ   ಸಭೆಯಲ್ಲಿ ಅಂಗಿಕಾರವಾಯಿತು. ನಂತರ 11/04/2017 ರಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿ 20/04/2017 ರಂದು ರಾಷ್ರ್ಟಪತಿಯವರಿಂದ ಅಂತಿಮವಾಗಿ ಅನುಮೋದಿಸಲ್ಪಟಿತ್ತು. 21/04/2017 ರಲ್ಲಿ ಭಾರತ ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಲಾಯಿತು. ಪ್ರಧಾನವಾಗಿ ಹಕ್ಕು-ಆಧಾರಿತವಾಗಿರುವ ಈ ಕಾಯಿದೆಯಡಿಯಲ್ಲಿ ತಾರತಮ್ಯತೆಯ ವಿರುದ್ಧದ ಹಕ್ಕು ಸಾರ್ವಜನಿಕ ವಲಯದೊಂದಿಗೆ ಖಾಸಗೀ ವಲಯವನ್ನು ಒಳಗೊಂಡಿದೆ.

 

 1. ಹೆಚ್‍ಐವಿಯೊಂದಿಗೆ ಬದುಕುತ್ತಿರುವ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಾಗಲೀ ಅಥವಾ ಖಾಸಗಿ ಕ್ಷೇತ್ರದಲ್ಲಾಗಲೀ ತನ್ನ ಮೇಲಾಗುವ ಹೆಚ್‍ಐವಿ ಸಂಬಂಧಿತ ತಾರತಮ್ಯತೆಯ ವಿರುದ್ಧ ಕಾನೂನಿನ ರಕ್ಷಣೆಗೆ ಕ್ರಮಕೈಗೊಳ್ಳಬಹುದು.
 2. ಯಾವುದೇ ವ್ಯಕ್ತಿಯ ಪ್ರಜ್ಞಾಪೂರ್ವಕ ಒಪ್ಪಿಗೆಯಿಲ್ಲದೇ ಆತನ ಹೆಚ್‍ಐವಿ ಪರೀಕ್ಷೆ ಮಾಡುವುದು ಅಥವಾ ಆತನಿಗೆ ಹೆಚ್‍ಐವಿ ಚಿಕಿತ್ಸೆ ನೀಡುವಂತಿಲ್ಲವೆಂದು ಮತ್ತು ವ್ಯಕ್ತಿಯೊಬ್ಬನ ಹೆಚ್‍ಐವಿ ಸ್ಥಿತಿ ಮತ್ತು ಆತನ ಹೆಚ್‍ಐವಿ ಬಗೆಗಿನ ಮಾಹಿತಿಗಳನ್ನು ಆತನ ಪ್ರಜ್ಞಾಪೂರ್ವಕ ಒಪ್ಪಿಗೆಯಿಲ್ಲದೇ ಬೇರೆಯವರಿಗೆ ಬಹಿರಂಗಗೊಳಿಸಬಾರದೆಂದು ಈ ಮಸೂದೆಯು ತಿಳಿಸುತ್ತದೆ.

 

ಕಾಯ್ದೆಯ ಉದ್ದೇಶ:

 

 1. ಕಳಂಕ ರಹಿತ ಮತ್ತು ತಾರತಮ್ಯವಿಲ್ಲದೇ ಹೆಚ್ಚಿನ ಸೇವೆಗಳನ್ನು ಕಲ್ಪಿಸುವ ವಾತಾವರಣ ನಿರ್ಮಿಸುವುದು.
 2. ಎಚ್‍ಐವಿ/ಏಡ್ಸ್‍ಗೆ ಸಂಬಂಧಿಸಿದಂತೆ ವ್ಯಕ್ತಿಯ ಗೌಪ್ಯತೆಯನ್ನು ಕಪಾಡುವುದು.
 3. ಎ.ಆರ್.ಟಿ ಚಿಕಿತ್ಸಾ ಕೆಂದ್ರಗಳಿಂದ ಹೆಚ್.ಐ.ವಿ ಸೋಂಕಿತರಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು.
 4. ಆರೋಗ್ಯ ಸೇವೆಗಳಲ್ಲಿ ಔದ್ಯೋಗಿಕ ಮಾನ್ಯತೆ ತಡೆಗಟ್ಟಲು ಸುರಕ್ಷಿತ ಕೆಲಸದ ವಾತಾವರಣ ನಿರ್ಮಿಸಲು ಪ್ರಚಾರ ಮಾಡುವುದು.
 5. ಹೆಚ್‍ಐವಿ ಸೋಂಕಿತರ ಪರಿಹಾರಕ್ಕಾಗಿ ದೂರು ವ್ಯವಸ್ಥೆಯನ್ನು ಬಲಪಡಿಸುವುದು.
 6. ಹೆಚ್.ಐ.ವಿ ಸೋಂಕಿತರ ವಿರುದ್ದ ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸೌಲಭ್ಯಗಳು, ಆಸ್ತಿ-ಹಕ್ಕುಗಳು, ಉದ್ಯೋಗ, ಚಳುವಳಿ, ಸಾರ್ವಜನಿಕ ಕಛೇರಿಗಳಲ್ಲಿ ಯಾವುದೇ ವ್ಯಕ್ತಿಯಿಂದ ಉಂಟಾಗುವ ತಾರತಮ್ಯವನ್ನು ನಿಷೇಧಿಸುವುದು.
 7. ಹೆಚ್.ಐ.ವಿ/ಏಡ್ಸ್ ಸೋಂಕಿತರಿಗೆ ಆಗುವ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆ ಹಾಗೂ ಕಳಂಕ ತಾರತಮ್ಯ ಉಂಟಾಗುವುದನ್ನು ನಿಷೇಧಿಸುವುದು
 8. ಮಹಿಳೆಯರ ಮತ್ತು ಮಕ್ಕಳ ವಿಶೇಷ ಉಪಬಂಧಗಳನ್ನು ಒದಗಿಸುವಲ್ಲಿ ಸಮರ್ಪಕವಾಗಿದೆ.
 9. ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಹೆಚ್.ಐ.ವಿ/ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ)ಕಾಯ್ದೆ 2017ರ ಸಂಬಂಧ ರಾಜ್ಯ ಸರ್ಕಾರವು ಈಗಾಗಲೇ ನಿಯಮಗಳನ್ನು ರೂಪಿಸಿ ದಿನಾಂಕ 12/09/2019ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

 

 

ಕಾಯ್ದೆ ಉಲ್ಲಂಘಗನೆಗೆ ವಿಧಿಸುವ ದಂಡ ಮತ್ತು ಶಿಕ್ಷೆ: ಸದ್ಯಕ್ಕೆ ಬೇರೆ ಯಾವುದೇ ಕಾನೂನಿನಡಿಯಲ್ಲಿ ತೆಗೆದುಕೊಳ್ಳಬಹುದಾದ ಯಾವುದೇ ಕ್ರಮಗಳ ಹೊರತಾಗಿಯೂ ಜಾರಿಯಲ್ಲಿರುವ ಸೆಕ್ಷನ್ 4 ರ ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ ಮೂರು ತಿಂಗಳಿಗಿಂತ ಕಡೆಮೆ ಇರದ ಹಾಗೂ ಒಂದು ವರ್ಷದವರೆಗೆ ವಿಸ್ತರಿಸಹುದಾದ ಅವಧಿಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಯವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದು.

 

 

ಇತ್ತೀಚಿನ ನವೀಕರಣ​ : 04-09-2020 01:28 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080