ಅಭಿಪ್ರಾಯ / ಸಲಹೆಗಳು

ಪ್ರಯೋಗಾಲಯದ (ಲ್ಯಾಬ್) ಸೇವೆಗಳು

ಪ್ರಯೋಗಾಲಯದ  (ಲ್ಯಾಬ್) ಸೇವೆಗಳು 

 

ಎನ್.ಎ.ಸಿ.ಪಿ 4 ರ ಅಡಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಗಳ ರೋಗಕಾರಕ ಸೂಕ್ಷ್ಮ ಜೀವಾಣುಗಳ ಪರೀಕ್ಷಾಲಯಗಳು ಮತ್ತು ಆರಂಬಿಕ ಶಿಶುವಿನಲ್ಲಿ ತಾಯಿಯಿಂದ ಮಗುವಿಗೆ ಹರಡುವ ರೋಗಾಣುವನ್ನು ಪತ್ತೆ ಹಚ್ಚುವ ಪ್ರಯೋಗಾಲಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಹಾಗೂ ಅಭಿವೃದ್ದಿ ಪಡಿಸಲು ಪ್ರಯೋಗಾಲಯ ಸೇವೆಗಳ ವಿಭಾಗವನ್ನು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ವಿಭಾಗವಾಗಿ ರಚಿಸಲಾಗಿದೆ.

 

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ  ತಲಾ ಒಂದೊಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯ ಮತ್ತು ಆರಂಬಿಕ ಶಿಶುವಿನಲ್ಲಿ ತಾಯಿಯಿಂದ ಮಗುವಿಗೆ ಹರಡುವ ರೋಗಾಣುವನ್ನು ಪತ್ತೆ ಹಚ್ಚುವ ಪ್ರಯೋಗಾಲಯವನ್ನು ನಿಮಾನ್ಸ್, ಬೆಂಗಳೂರು ಇಲ್ಲಿ ತನ್ನ ಕಾರ್ಯನಿರ್ವಹಿಸುತ್ತಿದೆ. ಹಾಗೂ 10 ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಗಳು ಮತ್ತು 7 ಸ್ಥಳಗಳಲ್ಲಿ ರೋಗಕಾರಕ ಸೂಕ್ಷ್ಮ ಜೀವಾಣುಗಳ ಪರೀಕ್ಷಾಲಯಗಳನ್ನು ರಾಜ್ಯದ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ತೆರೆಯಲಾಗಿದ್ದು ಅವುಗಳ ಕಾರ್ಯನಿರ್ವಹಣಾ ಕೇಂದ್ರಗಳ ವಿವರ ಈ ಕೆಳಕಂಡಂತಿದೆ.

 

ಸರಕಾರಿ ವಲಯ

 • ನಿಮಾನ್ಸ್, ಬೆಂಗಳೂರು
 • ಬೆಂಗಳೂರು ವೈದ್ಯಕೀಯ ಆನ್ವೇµಣೆ ಮತ್ತು ಮಹಾವಿದ್ಯಾಲಯ, - ಬೆಂಗಳೂರು
 • ವಿಜಯನಗರ ವೈದ್ಯಕೀಯ ವಿಜಾÐನ ಸಂಸ್ಥೆ, - ಬಳ್ಳಾರಿ,
 • ಕರ್ನಾಟಕ ವೈದ್ಯಕೀಯ ವಿಜಾÐನ ಸಂಸ್ಥೆ, –ಹುಬ್ಬಳ್ಳಿ,
 • ಬೀದರ್ ವೈದ್ಯಕೀಯ ವಿಜಾÐನ ಮಹಾ ವಿದ್ಯಾಲಯ ಸಂಸ್ಥೆ,

 

ಖಾಸಗಿ ವಲಯ

 • ಕಸ್ತೂರಿಬಾ ವೈದ್ಯಾಕೀಯ ಮಹಾವಿದ್ಯಾಲಯ, ಮಂಗಳೂರು.
 • ಕಸ್ತೂರಿಬಾ ವೈದ್ಯಾಕೀಯ ಮಹಾವಿದ್ಯಾಲಯ, ಮಣಿಪಾಲ, ಉಡುಪಿ ಜಿಲ್ಲೆ.
 • ಜಗದ್ಗುರು ಶ್ರೀ ಶಿವರಾತ್ರೀಶ್ವರ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು.
 • ಬಿ.ಎಂ.ಪಾಟೀಲ್ ವೈದ್ಯಕೀಯ ಮಹಾ ವಿದ್ಯಾಲಯ, ವಿಜಯಪುರ.
 • ಜವಹರಲಾಲ್ ವೈದ್ಯಕೀಯ ಮಹಾ ವಿದ್ಯಾಲಯ, ಬೆಳಗಾವಿ.
 • ಜಗದ್ಗುರು ಜಯದೇವ ಮುರುಗರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ- ದಾವಣಗೆರೆ.

 

ಚಿಕಿತ್ಸಾಲಯಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ

 

ರಾಜ್ಯದಲ್ಲಿರುವ ಒಟ್ಟು 11 ಪ್ರಯೋಗಾಲಯಗಳಲ್ಲಿ ರಾಷ್ಟ್ರ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ  ಗುರುತಿಸಿಕೊಂಡಿರುವ ಪ್ರಯೋಗಾಲಯಗಳ ಪೈಕಿ 10 ಪ್ರಯೋಗಾಲಯಗಳು “ಚಿಕಿತ್ಸಾಲಯಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ“ ಯಿಂದ ಮಾನ್ಯತಾ ಪತ್ರವನ್ನು ಪಡೆದುಕೊಂಡಿವೆ ಅವುಗಳ ವಿವರ ಈ ಕೆಳಕಂಡಂತಿದೆ.

 

 • ನಿಮಾನ್ಸ್, ಬೆಂಗಳೂರು
 • ಬೆಂಗಳೂರು ವೈದ್ಯಕೀಯ ಆನ್ವೇµಣೆ ಮತ್ತು ಮಹಾವಿದ್ಯಾಲಯ, - ಬೆಂಗಳೂರು
 • ವಿಜಯನಗರ ವೈದ್ಯಕೀಯ ವಿಜಾÐನ ಸಂಸ್ಥೆ, - ಬಳ್ಳಾರಿ,
 • ಕರ್ನಾಟಕ ವೈದ್ಯಕೀಯ ವಿಜಾÐನ ಸಂಸ್ಥೆ, –ಹುಬ್ಬಳ್ಳಿ,
 • ಕಸ್ತೂರಿಬಾ ವೈದ್ಯಾಕೀಯ ಮಹಾವಿದ್ಯಾಲಯ, ಮಂಗಳೂರು.
 • ಕಸ್ತೂರಿಬಾ ವೈದ್ಯಾಕೀಯ ಮಹಾವಿದ್ಯಾಲಯ, ಮಣಿಪಾಲ, ಉಡುಪಿ ಜಿಲ್ಲೆ.
 • ಜಗದ್ಗುರು ಶ್ರೀ ಶಿವರಾತ್ರೀಶ್ವರ ವೈದ್ಯಕೀಯ ಮಹಾವಿದ್ಯಾಲಯ – ಮೈಸೂರು.
 • ಬಿ.ಎಂ.ಪಾಟೀಲ್ ವೈದ್ಯಕೀಯ ಮಹಾ ವಿದ್ಯಾಲಯ, ವಿಜಯಪುರ.
 • ಜವಹರಲಾಲ್ ವೈದ್ಯಕೀಯ ಮಹಾ ವಿದ್ಯಾಲಯ, ಬೆಳಗಾವಿ.
 • ಜಗದ್ಗುರು ಜಯದೇವ ಮುರುಗರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ- ದಾವಣಗೆರೆ.

 

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ಹೊಂದಿರುವ 90-90-90 ನಿಯಮದಂತೆ ಮೂರನೇ ವಿಧಳನಾ ವರ್ಗವು ಶೇಕಡ 90% ಎ.ಆರ್.ಟಿ ರೋಗಿಗಳಿಗೆ ಭಾದಿಸಿದ ರೋಗಕಾರಕ ಸೂಕ್ಷ್ಮ ಜೀವಾಣುಗಳ  ನಿಗ್ರಹ ಅವಶ್ಯಕವಾಗಿದೆ. ಹೀಗೆ ರೋಗಕಾರಕ ಸೂಕ್ಷ್ಮ ಜೀವಾಣುಗಳ ನಿಗ್ರಹಕ್ಕೆ ರೋಗಕಾರಕ ಸೂಕ್ಷ್ಮ ಜೀವಾಣುಗಳ ಪರೀಕ್ಷಾ ಪ್ರಯೋಗಾಲಯ ಕೇಂದ್ರಗಳ ತೆರೆಯುವಿಕೆ ಅತ್ಯವಶ್ಯಕವಾಗಿದೆ. ಎಚ್.ಐ.ವಿ ಸೂಕ್ಷ್ಮ ರೋಗಾಣುವಿನ ಪರೀಕ್ಷೆಯು ಈ ಕಾಯಿಲೆಯನ್ನು ಹೊಂದಿರುವ ರೋಗಿಯನ್ನು ರೋಗದ ಪ್ರಮಾಣವನ್ನು ಅಳೆಯುವಲ್ಲಿ ಇದು ತನ್ನ ನಿರ್ವಹಣೆಯನ್ನು ಮಾಡುತ್ತದೆ. ಇದು ಸೂಕ್ಷ ರೋಗಾಣುಗಳ ಆರ್.ಎನ್.ಎ ಗಳ ಪ್ರಮಾಣವನ್ನು ಅಳೆಯುವಲ್ಲಿ ನೇರ ಸಂಬಂಧ ಹೊಂದಿದೆ.

 

 

ರಾಜ್ಯದಲ್ಲಿರುವ ರೋಗಕಾರಕ ಸೂಕ್ಷ್ಮ ಜೀವಾಣುಗಳ ಪ್ರಯೋಗಾಲಯಗಳ ವಿವರ ಕೆಳಕಂಡಂತೆ ಇರುತ್ತದೆ.

 

 • ನಿಮಾನ್ಸ್, ಬೆಂಗಳೂರು
 • ಬೆಂಗಳೂರು ವೈದ್ಯಕೀಯ ಆನ್ವೇµಣೆ ಮತ್ತು ಮಹಾವಿದ್ಯಾಲಯ, - ಬೆಂಗಳೂರು.
 • ವಿಜಯನಗರ ವೈದ್ಯಕೀಯ ವಿಜಾÐನ ಸಂಸ್ಥೆ, - ಬಳ್ಳಾರಿ
 • ಜಗದ್ಗುರು ಶ್ರೀ ಶಿವರಾತ್ರೀಶ್ವರ ವೈದ್ಯಕೀಯ ಮಹಾವಿದ್ಯಾಲಯ - ಮೈಸೂರು.
 • ಬಿ.ಎಂ.ಪಾಟೀಲ್ ವೈದ್ಯಕೀಯ ಮಹಾ ವಿದ್ಯಾಲಯ, ವಿಜಯಪುರ.
 • ಜವಹರಲಾಲ್ ವೈದ್ಯಕೀಯ ಮಹಾ ವಿದ್ಯಾಲಯ, ಬೆಳಗಾವಿ.
 • ಜಗದ್ಗುರು ಜಯದೇವ ಮುರುಗರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ- ದಾವಣಗೆರೆ.
 • ಮೆಕ್‍ಗ್ಗಾನ್ ಜಿಲ್ಲಾಸ್ಪತ್ರೆ ಶಿವಮೊಗ್ಗ

 

 

ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಗಳ ಚಟುವಟಿಕೆಗಳು

 

 • ಬಾಹ್ಯ ಗುಣಮಟ್ಟದ ಮೌಲ್ಯಮಾಪನ ಯೋಜನೆ
 • ಅಸ್ಪಷ್ಟ ಮಾದರಿಯ ಪಲಿತಾಂಶಗಳನ್ನು ಹಿಮ್ಮುಖಗೊಳಿಸುವುದು.
 • ಅನಿರ್ದಿಷ್ಟ ಫಲಿತಾಂಶಗಳೊಂದಿಗೆ ಪರೀಕ್ಷಾ ಮಾದರಿಗಳು
 • ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವಪ್ರಯೋಗಾಲಬಾಹ್ಯ ಗುಣಮಟ್ಟದ ಮೌಲ್ಯಮಾಪನ
 • ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯ ಮತ್ತು ಆಪ್ತಸಮಾಲೋಚನಾ ಕೇಂದ್ರಗಳಿಗೆ ಸಂಪರ್ಕ ಸಾದಿಸುವಲ್ಲಿ ನಿರ್ವಹಣೆ ಮಾಡುವುದು.
 • ಎಚ್ಐವಿ -2 ರೋಗನಿರ್ಣಯದಲ್ಲಿ ಖಚಿತ ಪಡಿಸುವಿಕೆ.
 • ಹೆಚ್.ಐ.ವಿ ಸೂಕ್ಷ್ಮ ಕಣ್ಣುಗಾವಲು
 • ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವಪ್ರಯೋಗಾಲಯಗಳ ಚಟುವಟಿಕೆಗಳ ವರದಿಯನ್ನು ಸಿಮ್ಸ್ ನ ತಂತ್ರಾಂಶದಲ್ಲಿ ನಮೂದಿಸುವುದು.
 • ಅಗತ್ಯವಾದ ಯಾವುದೇ ಮಾಹಿತಿ ಅಥವಾ ಡೇಟಾದ ಬಗ್ಗೆ ನ್ಯಾಕೊ ಅಥವಾ ಮೂಲ ಯೋಗಾಲಯದೊಂದಿಗೆ ಸಂಪರ್ಕಿಸಿ ಮತ್ತು ಸಂವಹನ ಮಾಡಿಕೊಳ್ಳುವುದು.
 • ನ್ಯಾಕೊ ನಡೆಸುವ ಯಾವುದೇ ತರಬೇತಿ ಅಥವಾ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವುದು.
 • ಉನ್ನತ ಮಟ್ಟದ  ಸಭೆಯಲ್ಲಿ ಅಥವಾ ವಾರ್ಷಿಕ ಚಟುವಟಿಕೆಗಳಲ್ಲಿ ಪ್ರತಿನಿಧಿಸುವುದು ಮತ್ತು ವರದಿಗಳನ್ನು ಪ್ರಸ್ತುತ ಪಡಿಸುವುದು.
 • ನಿಗದಿತ ಉದ್ದೇಶಗಳ ಚಟುವಟಿಕೆಗಳಿಗಾಗಿ ಬಿಡುಗಡೆಗೊಂಡ ಅನುದಾನವನ್ನು ಸದ್ಬಳಕೆ ಮಾಡಿ ಆರ್ಥಿಕ ಸಾಲಿನ ಅಂತ್ಯಕ್ಕೆ ಕೇಂದ್ರಾಡಳಿತಕ್ಕೆ ನಿಗದಿತ ಸಮಯದೋಳಗೆ ಉಪಯೋಗತಾ ಪ್ರಮಾಣಪತ್ರವನ್ನು ತಲುಪುವಂತೆ ನೋಡಿಕೊಳ್ಳುವುದು.

 

ನ್ಯಾಕೋ ಅನುದಾನದಅಡಿಯಲ್ಲಿ ಕೆಲಸಮಾಡುವ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಗಳ ಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳನ್ನು ಈಕೆಳಕಂಡಂತೆ ವಿವರಿಸಲಾಗಿದೆ.

 

 • ಉತ್ತಮ ಗುಣಮಟ್ಟದ ಪರೀಕ್ಷೆಗಾಗಿ ಆಪ್ತಸಮಾಲೋಚನಾ ಕೇಂದ್ರದ ಪ್ರಯೋಗಾಲಯ ತಂತ್ರಜ್ಞರನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅವರಿಗೆ ಸಂಬಂದಿಸಿದ ಮಾಹಿತಿಯ ಬಗ್ಗೆ ಮಾರ್ಗದರ್ಶನ ನೀಡುವುದು
 • ಎನ್ಎಸಿಪಿ ಅಡಿಯಲ್ಲಿ ಬಾಹ್ಯ ಗುಣಮಟ್ಟದ ಮೌಲ್ಯಮಾಪನ ಯೋಜನೆಯಲ್ಲಿ ಪಾಲ್ಗೊಳ್ಳುವುದು
 • ಬಾಹ್ಯ ಗುಣಮಟ್ಟದ ಮೌಲ್ಯಮಾಪನ ಯೋಜನೆ ಕ್ಯಾಲೆಂಡರ್ (8 ಸದಸ್ಯರ ಸಮಿತಿ ) ವರದಿಯ ಪ್ರಕಾರ ವರ್ಷಕ್ಕೆ ಎರಡು ಬಾರಿ ಅವರಿಗೆ ಕುಶಲತೆಯ ಪರೀಕ್ಷೆಯನ್ನು ಒದಗಿಸುವುದು
 • ಕುಶಲತೆ ಪರೀಕ್ಷೆ ಕೈಗೊಂಡ ಸಮಿತಿಯ ವರದಿಯನ್ನು ಸಂಬಂಧಪಟ್ಟ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವಪ್ರಯೋಗಾಲಯಕ್ಕೆ 1 ವಾರದೊಳಗೆ ಕಳುಹಿಸುವುದು.
 • ಕುಶಲತೆ ಪರೀಕ್ಷೆ ಫಲಕವನ್ನು (4 ಸದಸ್ಯರನ್ನು) ಆಪ್ತ ಸಮಾಲೋಚನಾ ಕೇಂದ್ರಕ್ಕೆ ಕಳುಹಿಸುವಂತೆ ಪರೀಕ್ಷಿಸಲು ಮತ್ತು ಮರು ಸಂಗ್ರಹಿಸಲು ಕ್ರಮಕೈಗೊಳ್ಳುವುದು
 • ಆಪ್ತ ಸಮಾಲೋಚನಾ ಕೇಂದದ್ರ ಕುಶಲತೆ ಪರೀಕ್ಷಾ ಫಲಿತಾಂಶಗಳನ್ನು ಮುಂದಿನ ಪರೀಕ್ಷಾ ಹಂತದಲ್ಲಿ ತಾಳೆ ನೋಡಲು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ 1 ವಾರದೊಳಗೆ ಕಳುಹಿಸುವುದು.

 

 • ನೆಲ ಮಟ್ಟದ ಕೇಂದ್ರಗಳಿಂದ ಯಾವುದೇ ವರದಿ ಬರದಿದ್ದಲ್ಲಿ ಸಂಬಂದಿಸಿದ ಕೇಂದ್ರಗಳು ಮತ್ತು ಕೆ.ಎಸ್.ಎ.ಪಿ.ಎಸ್ ಅನ್ನು ಅನುಸರಿಸುವುದು.

 

 • ಕುಶಲತೆ ಪರೀಕ್ಷೆಯಲ್ಲಿನ ತಪ್ಪುಗಳ ಬಗ್ಗೆ ಅಥವಾ ಸಂಬಂಧಪಟ್ಟ ತಂತ್ರಜ್ಞರ ಜೊತೆಗಿನ ಪ್ರಯೋಗಾತ್ಮಕ ದೋಷಗಳ ಬಗ್ಗೆ ಅಪಶೃತಿ ಬರದಂತೆ ಎರಡು ವಾರ್ಷಿಕ ಕಾರ್ಯಾಗಾರಗಳು (ಅಗತ್ಯವಾದ 1-2 ದಿನಗಳ ಅವಧಿಯವರೆಗೆ) ಮಾಡುವುದು.

 

 • ಆಪ್ತಸಮಾಲೋಚನಾ ಕೇಂದ್ರಗಳಿಂದ ಬಂದ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಿನ ಮೊದಲ 7 ದಿನಗಳಲ್ಲಿ ಪಡೆದ ಪರೀಕ್ಷಾ ಮಾದರಿಗಳ ಶೇಕಡ 20% ಧನಾತ್ಮಕ ಮತ್ತು 5% ನಕಾರಾತ್ಮಕ ಮಾದರಿಗಳನ್ನು ಮರುಪರೀಕ್ಷಿಸಲು ಮತ್ತು ವಿಶೇಷವಾಗಿ ಎಲ್ಲಿ ಅಸಂಬದ್ದತೆ ಕಂಡುಬಂದಿದೆಯೋ ಅಂತಹ ಸ್ಥಳಗಳಲ್ಲಿ ಮಾದರಿ ಪಡೆದ 7 ದಿನಗಳ ಒಳಗಾಗಿ ಅಂತರ ಪ್ರಯೋಗಾಲಯದ ಅಪಶೃತಿಗಳ ಮೌಲ್ಯಮಾಪನಕ್ಕಾಗಿ ವರದಿ ಕಳುಹಿಸಿ ಕೊಡುವುದು.

 

 • ಆಪ್ತಸಮಾಲೋಚನಾ ಕೇಂದ್ರಗಳಿಂದ ಪಡೆದ 20% ಧನಾತ್ಮಕಮತ್ತು 5% ನಕಾರಾತ್ಮಕ ಮಾದರಿಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯ ನಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಅಂತರಪ್ರಯೋಗಾಲಯದ ಹೋಲಿಕೆಗೆ ಭಾಗವಹಿಸಲು (ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ನ ಮೊದಲ 7 ದಿನಗಳಲ್ಲಿ).

 

 • ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯದ ಮಾದರಿಗಳನ್ನು ಉಲ್ಲೇಖಿಸುವ ಮೂಲಕ ಎಲ್ಲಾ ಅನಿರ್ದಿಷ್ಟ ಮತ್ತು ಅಸಾಂಪ್ರದಾಯಿಕ ಮಾದರಿಗಳನ್ನು ದೃಢೀಕರಿಸುವುದು.

 

 • ಎಲ್ಲಾ ಹೆಚ್.ಐ.ವಿ 1/2 ಧನಕ್ರಿಯಾತ್ಮಕ ಮಾದರಿಗಳನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಯೋಗಾಲಯಕ್ಕೆ ದಾಖಲೆ ಮಾಡಲು ಕಳುಹಿಸುವುದು.

 

 • ನ್ಯಾಕೊ ವಿನಂತಿಸಿದಾಗ ಎಚ್ಐವಿ ಸೋಂಕು ಸಂಬಂಧಿಸಿದ ಇತರ ಪ್ರಯೋಗಾಲಯ ಚಟುವಟಿಕೆಗಳಲ್ಲಿ ಭಾಗವಹಿಸುವುದು.

 

 • ಎಚ್ಐವಿ ಸೋಂಕಿನ ಕಣ್ಣುಗಾವಲು ಕಾರ್ಯಕ್ರಮದಲ್ಲಿ ಗೊತ್ತುಪಡಿಸಿದ ಪರೀಕ್ಷಾ ಪ್ರಯೋಗಾಲಯಗಳಲ್ಲಿ ತಪ್ಪದೇ ಭಾಗವಹಿಸುವುದು.

 

 

 

 

ಇತ್ತೀಚಿನ ನವೀಕರಣ​ : 01-10-2020 12:53 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080