ಅಭಿಪ್ರಾಯ / ಸಲಹೆಗಳು

ಜನನಾಂಗ ಮಾರ್ಗ ಮತ್ತು ಲೈಂಗಿಕ ಮಾರ್ಗದ ಸೋಂಕುಗಳು

ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳು (ಎಸ್.ಟಿ.ಐ/ಆರ್.ಟಿ.ಐ) ಒಬ್ಬರಿಂದ ಒಬ್ಬರಿಗೆ ಹಲವಾರು ವಿದಗಳಿಂದ ಹರಡುತ್ತವೆ. ಸಿಪಿಲಸ್ ಮತ್ತು ಗೊನೋರಿಯಾ ಸೋಂಕುಗಳನ್ನೊಳಗೊಂಡಂತೆ 20 ತರಹದ ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳಿದ್ದು ಅವುಗಳಿಗೆ ಪರೀಕ್ಷೆ ಮತ್ತು ಚಿಕಿತ್ಸ್ಸೆಗಳ ತಿಳಿವಳಿಕೆಯ ಜೊತೆಗೆ ಮಾಹಿತಿಗಳನ್ನು ಡಿ.ಎಸ್.ಆರ್.ಸಿ ಕ್ಲಿನಿಕ್‍ಗಳ ಮುಖಾಂತರ ಜನ ಸಾಮಾನ್ಯರಿಗೆ ತಲುಪಿಸಲಾಗುತ್ತದೆ. ಇನ್ನೂ ಗಮನಿಸಬೇಕಾದ ಅಂಶವೆಂದರೆ ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳ ಸಮರ್ಪಕವಾದ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಿಂದ ಎಚ್ ಐ ವಿ ಸೋಂಕಿನ ಪ್ರಮಾಣವನ್ನು 40% ರಷ್ಟು ಕಡಿಮೆಗೊಳಿಸಬಹುದಾಗಿದೆ.

 

ನ್ಯಾಕೋವತಿಯಿಂದ ರಾಜ್ಯದಲ್ಲಿ ಒಟ್ಟು 143 ಕೇಂದ್ರಗಳಿಂದ ಎಸ್.ಟಿ.ಐ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳಲ್ಲಿ 54 ಡಿ.ಎಸ್.ಆರ್.ಸಿ ಕೇಂದ್ರಗಳಾದರೆ ಉಳಿದ 76 ಟಿ.ಐ ಎನ್.ಜಿ.ಓ ಕೇಂದ್ರಗಳಾಗಿರುತ್ತವೆ.

 

ಡೆಸಿಗ್ನೇಟೆಡ್ ಎಸ್.ಟಿ.ಐ./ಆರ್.ಟಿ.ಐ. ಸೆಂಟರ್ (ಡಿ.ಎಸ್.ಆರ್.ಸಿ) ಹಾಗೂ ಸ್ಟೇಟ್ ರೆಫೆರೆನ್ಸ್ ಸೆಂಟರ್ (ಎಸ್.ಆರ್.ಸಿ.) ಕೇಂದ್ರದ ಕಾರ್ಯನಿರ್ವಹಣೆ:


ಪ್ರತಿಯೊಂದು ಡಿಎಸ್‍ಆರ್‍ಸಿ ಕೇಂದ್ರಕ್ಕೆ ನ್ಯಾಕೋ ಮಾರ್ಗಸೂಚಿಯನ್ವಯ ಪೋಸ್ಟರ್‍ಗಳು, ಫ್ಲಿಪ್ ಬುಕ್‍ಗಳು, ಮತ್ತು ದಾಖಲಾತಿಗೆ ಸಂಬಂಧಿಸಿದ ವಹಿಗಳನ್ನು ಪೂರೈಸಲಾಗಿದ್ದು ಒಬ್ಬ ಆಪ್ತಸಮಾಲೋಚಕರು ಕಾಯನಿರ್ವಹಿಸುತ್ತಿರುತ್ತಾರೆ. ಆಪ್ತಸಮಾಲೋಚಕರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಲೈಂಗಿಕ ಸಂಪರ್ಕ ಸೋಂಕನ್ನು ನಿಯಂತ್ರಿಸುವುದಕ್ಕೋಸ್ಕರ ಮಾಹಿತಿ ನೀಡಿ, ಆಪ್ತಸಮಾಲೋಚನೆ ನಡೆಸಿ, ರೋಗಿಯ ಚಿಕಿತ್ಸೆ ನಿರೋದ್ ಉಪಯೋಗ ಜೊತೆಗೆ ಗಂಡ/ಹೆಂಡತಿ/ಜೊತೆಗಾರರ ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಉಚಿತ ಎಸ್.ಟಿ.ಐ/ಆರ್.ಟಿ.ಐ ಔಷದಿಗಳ ವಿತರಣೆ ಜೊತೆಗೆ ಕಾಂಡೋಮನ್ನು ವಿತರಿಸಿ ರೋಗಿಯನ್ನು ಹೆಚ್.ಐ.ವಿ ಮತ್ತು ಸಿಫಿಲಸ್ ಪರೀಕ್ಷೆಗಾಗಿ ಐಸಿಟಿಸಿ ಕೇಂದ್ರಕ್ಕೆ ಕಳುಹಿಸುತ್ತಾರೆ.
ಪ್ರತಿ ಎಸ್.ಆರ್.ಸಿ ಕೇಂದ್ರಕ್ಕೆ ಒಬ್ಬ ಪ್ರಯೋಗಾಶಾಲ ತಂತ್ರಜ್ಞರನ್ನು ಒದಗಿಸಲಾಗಿದೆ. ಎಸ್‌ಟಿಐ / ಆರ್‌ಟಿಐಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ, ವೈರಲ್, ಪರಾವಲಂಬಿ ಮತ್ತು ಶಿಲೀಂಧ್ರ ರೋಗಕಾರಕಗಳಿಗೆ ರಾಜ್ಯ ಎಸ್‌ಟಿಐ ಪ್ರಯೋಗಾಲಯಗಳು ರೋಗನಿರ್ಣಯ ಪರೀಕ್ಷೆಗಳನ್ನು ಒದಗಿಸುತ್ತವೆ. ಎಲ್ಲಾ ಸಂಬಂಧಿತ ಸೌಲಭ್ಯಗಳಲ್ಲಿ ಸಿಫಿಲಿಸ್ ಸ್ಕ್ರೀನಿಂಗ್ಗಾಗಿ ಲ್ಯಾಬ್ ಬಾಹ್ಯ ಗುಣಮಟ್ಟದ ಭರವಸೆ ಕಾರ್ಯಕ್ರಮವನ್ನು (ಇಕ್ಯೂಎಎಸ್) ನಡೆಸುತ್ತದೆ - (ವೈದ್ಯಕೀಯ ಕಾಲೇಜುಗಳು / ಜಿಲ್ಲಾ / ಉಪ ಜಿಲ್ಲಾ ಆಸ್ಪತ್ರೆಗಳು / ಟಿಐ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಎಸ್‌ಟಿಐ ಚಿಕಿತ್ಸಾಲಯಗಳು / ಎಸ್‌ಟಿಐ ಚಿಕಿತ್ಸಾಲಯಗಳು)

 

ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್‍ಗಳ ಗುರುತು:


ನ್ಯಾಕೋ ಅನುದಾನದಡಿಯಲ್ಲಿರುವ ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್‍ಗಳನ್ನು “ಸುರಕ್ಷಾ ಕ್ಲಿನಿಕ್” ಎಂದು ಹೆಸರಿಸಲಾಗಿದೆ. ಡಿ.ಎಸ್.ಆರ್.ಸಿ ಕೇಂದ್ರಗಳು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಎಸ್.ಆರ್.ಸಿ ಕೇಂದ್ರಗಳು ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಾಜಿ ವಿಭಾಗದಲ್ಲಿ ಕಾಂiÀರ್iನಿರ್ವವಹಿಸುತ್ತಿದೆ, ಕಿಮ್ಸ್ ಹುಬ್ಬಳ್ಳಿ, ದಾರವಾಡ ಜಿಲ್ಲೆ ಮತ್ತು ಬಿ.ಎಂ.ಆರ್.ಸಿ.ಐ., ಬೆಂಗಳೂರು ಜಿಲ್ಲೆ. ಈ ಸುರಕ್ಷಾ ಕ್ಲಿನಿಕ್‍ಗಳಲ್ಲಿ ರೋಗಲಕ್ಷಣಗಳಿಗೆ ಅನುಗುಣವಾಗಿ ವಿವಿದ ಏಳು ಬಣ್ಣಗಳ ಪ್ಯಾಕೆಟ್‍ಗಳಲ್ಲಿ ಎಸ್.ಟಿ.ಐ/ಆರ್.ಟಿ.ಐ ಔಷಧಗಳನ್ನು “ಉಚಿತವಾಗಿ” ರೋಗಿಗಳಿಗೆ ನೀಡಲಾಗುತ್ತಿದೆ.

 

ಇತ್ತೀಚಿನ ನವೀಕರಣ​ : 04-09-2020 01:21 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080