ಅಭಿಪ್ರಾಯ / ಸಲಹೆಗಳು

ಗುರಿ ನಿರ್ಧರಿತ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯದ ಹೆಚ್‍ಐವಿ/ಏಡ್ಸ್ ತಡೆ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಒಂದು ಪ್ರಮುಖಕಾರ್ಯಕ್ರಮಗುರಿ ನಿರ್ಧಾರಿತ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಲೈಂಗಿಕ ವೃತ್ತಿ ನಿರತರನ್ನು ಗುರುತಿಸಿ ಅವರಿಗೆ ಹೆಚ್‍ಐವಿ/ಏಡ್ಸ್ ಸೊಂಕಿನ ಬಗ್ಗೆ ತಿಳುವಳಿಕೆಯನ್ನು ಮೂಡಿಸಿ, ಹೆಚ್‍ಐವಿ ತಡೆ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಸಮುದಾಯದಲ್ಲಿರುವ ಇತರ ಮಹಿಳೆಯರನ್ನು ಹೆಚ್‍ಐವಿ ಸೊಂಕಿನಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮವು ರೂಪಿತವಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯಿಂದ ನಡೆಸಲ್ಪಡುವ ಹೆಚ್‍ಐವಿ ಸೋಂಕಿಗೆ ಅಪಾಯದಂಚಿನಲ್ಲಿರುವ ಸಮುದಾಯಗಳಿಗೆ ಹೆಚ್.ಐ.ವಿ ತಡೆಗಟ್ಟುವ ಕಾರ್ಯಕ್ರಮವನ್ನು ನ್ಯಾಕೋ ಸಂಸ್ಥೆಯ ಅನುದಾನದೊಂದಿಗೆ 1992 ರಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಂಪೂರ್ಣವಾಗಿ ನ್ಯಾಕೋ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಸಂಸ್ಥೆಯಕಾರ್ಯಸೂಚಿಅನುಸಾರವಾಗಿ (ಮಾರ್ಗಸೂಚಿಯಂತೆ) ಅನುಷ್ಠಾನಗೊಳಿಸಲಾಗುತ್ತಿದೆ.

 

 

ಈ ಕಾರ್ಯಕ್ರಮದಲ್ಲಿ ರಾಜ್ಯದ 76874 ಲೈಂಗಿಕ ವೃತ್ತಿನಿರತ ಮಹಿಳೆಯರು, 22411 ಪುರುಷ ಲೈಂಗಿಕ ಸಂಪರ್ಕ ಹೊಂದಿದವರಿಗೆ ಮತ್ತು 2154 ಮಂಗಳಮುಖಿಯರು , 950 ಮಾದಕ ವ್ಯಸನಿಗಳು, 142000 ವಲಸಿಗರು ಮತ್ತು 80000 ಲಾರಿಚಾಲಕರನ್ನು ಫಲಾನುಭವಿಗಳಾಗಿ ಗುರುತಿಸಲಾಗಿದೆ. ಗುರಿ ನಿರ್ಧಾರಿತ ಕಾರ್ಯಕ್ರಮಗಳಡಿಯಲ್ಲಿ ನೊಂದಾಯಿತರಾದ ಸಮುದಾಯಗಳಿಗೆ ಹೆಚ್.ಐ.ವಿ ಸೋಂಕಿನ ಬಗ್ಗೆ ತಿಳಿವಳಿಕೆ, ನಿಯಮಿತವಾದ ಭೇಟಿ 3 ತಿಂಗಳಿಗೊಮ್ಮೆ ವೈದ್ಯಕೀಯತಪಾಸಣೆ, 6 ತಿಂಗಳಿಗೊಮ್ಮೆ ಹೆಚ್.ಐ.ವಿ ಸೋಂಕಿನ ಪತ್ತೆ ಪರೀಕ್ಷೆ, ಉಚಿತಕಾಂಡೋಮ್ ವಿತರಣೆ ಮತ್ತು ಹೆಚ್.ಐ.ವಿ ಸೋಂಕು ಪತ್ತೆಯಾದ ವ್ಯಕ್ತಿಗಳನ್ನು ಉಚಿತ ಎ.ಆರ್.ಟಿ ಚಿಕಿತ್ಸಾ ಕೇಂದ್ರಗಳಿಗೆ ನೊಂದಾಯಿಸುವುದು ಇವೇ ಮುಂತಾದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳ ಸಹಭಾಗಿತ್ವದೊಂದಿಗೆ ಅನುಷ್ಟಾನಗೊಳಿಸುತ್ತಿದೆ. ಗುರಿ ನಿರ್ಧಾರಿತ ಕಾರ್ಯಕ್ರಮಗಳ ಎಲ್ಲಾ ಚಟುವಟಿಕೆಗಳನ್ನು ಸಹಭಾಗಿತ್ವ ಸಂಸ್ಥೆಗಳ ಮೂಲಕವೇ ನಡೆಸಲಾಗುತ್ತಿದೆ ಮತ್ತು ಅವರೊಂದಿಗೆ ಮಾಡಿಕೊಂಡ ವಿಶ್ವ ಬ್ಯಾಂಕ್‍ನ ಅಧಿಸೂಚಿತ ಕರಾರಿನ ಪ್ರಕಾರ ಈ ಕಾರ್ಯಕ್ರಮಕ್ಕೆ ತಗಲುವ ಎಲ್ಲಾ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕ ಪತ್ರಗಳನ್ನು ಅಧಿಕೃತವಾಗಿ ಲೆಕ್ಕ ಪರಿಶೋಧನೆ ಮಾಡಿದ ನಂತರ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತದೆ.


ಹೆಚ್.ಐ.ವಿ ತಡೆ ಕಾರ್ಯಕ್ರಮಗಳಲ್ಲಿ ಕಾಂಡೋಮ್/ನಿರೋಧ್ ವಿತರಣೆಯು ಒಂದು ನ್ಯಾಕೋ ಸೂಚಿತ ಚಟುವಟಿಕೆಯಾಗಿದ್ದು ಇದಕ್ಕೆ ಬೇಕಾಗಿರುವ ಕಾಂಡೋಮ್/ನಿರೋಧ್‍ಗಳನ್ನು ನ್ಯಾಕೋ ಸಂಸ್ಥೆಯೆ ಕರ್ನಾಟಕವು ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಒದಗಿಸುತ್ತಿದೆ. ಕಾಂಡೋಮ್/ನಿರೋಧ್ ಬಳಕೆಯಿಂದಾಗಿ ಅನಿವಾರ್ಯ ಕಾರಣಗಳಿಂದ, ಸಮಾಜದ ಅನಿಷ್ಟ ಸಂಪ್ರದಾಯಗಳಿಂದ (ದೇವದಾಸಿ ಪದ್ದತಿ) ಮತ್ತು ಸಮಾಜ ವಿರೋಧಿ ಶಕ್ತಿಗಳಿಂದ ಶೋಷಣೆಗೊಳಗಾಗಿ ವೇಶ್ಯವಾಟಿಕೆಗೆ ತಳ್ಳಲ್ಪಟ್ಟ ಸಾವಿರಾರು ಮಹಿಳೆಯರನ್ನು ಹೆಚ್,ಐ.ವಿ ಸೋಂಕಿನಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ವೇಶ್ಯವಾಟಿಕೆ ಮೂಲಕ ಇತರ ಲಕ್ಷಾಂತರ ಗಿರಾಕಿಗಳನ್ನು ಕೂಡ ಹೆಚ್.ಐ.ವಿ ಮತ್ತು ಲೈಂಗಿಕ ಸಂಪರ್ಕ ಸೋಂಕಿನಿಂದ ಪಾರುಮಾಡಿ ಅವರ ಕುಟುಂಬಗಳನ್ನು ಈ ಸೋಂಕಿನಿಂದ ದೂರವಿರುವಂತೆ ಮಾಡಲಾಗಿದೆ.

ಕಾರ್ಯಕ್ರಮದಡಿಯಲ್ಲಿ ನಡೆಸಲ್ಪ್ಪಡುವ ಕಾರ್ಯಕ್ರಮಗಳು ಮುಖ್ಯವಾಗಿ ಕೆಳಗಿನಂತಿದೆ.

 


• ಕರ್ನಾಟಕ ರಾಜ್ಯದಲ್ಲಿ ಹೆಚ್‍ಐವಿಗೆ ತುತ್ತಾಗಬಹುದಾದ ಅತ್ಯಂತ ಅಪಾಯದಲ್ಲಿರುವ ಗುಂಪುಗಳನ್ನು ಗುರಿ ನಿರ್ಧಾರಿತ ಕಾರ್ಯಕ್ರಮಗಳ (ಟಿಐ) ವ್ಯಾಪ್ತಿಯಲ್ಲಿ ತೊಡಗಿಸಿಕೊಳ್ಳುವುದು.
• ಹೆಚ್‍ಐವಿಗೆ ತುತ್ತಾಗಬಹುದಾದ ಅತ್ಯಂತ ಅಪಾಯದಲ್ಲಿರುವ ಗುಂಪುಗಳಾದ ಮಹಿಳಾ ಲೈಂಗಿಕ ಕಾರ್ಯಕರ್ತರು, ಎಂ.ಎಸ್.ಎಂ ಟಿಐ. ಮಾದಕ ವ್ಯಸನಿಗಳು, ವಲಸಿಗರು, ಲಾರಿ ಚಾಲಕರುಗಳಿಗೆ ಹೆಚ್‍ಐವಿ ಸೊಂಕಿನ ಬಗ್ಗೆ ತಿಳುವಳಿಕೆ ಮೂಡಿಸುವುದು.
• ಹೆಚ್‍ಐವಿಗೆ ತುತ್ತಾಗಬಹುದಾದ ಅತ್ಯಂತ ಅಪಾಯದಲ್ಲಿರುವ ಗುಂಪುಗಳ ಜನರು ತಮ್ಮ ಸಂಗಾತಿಗಳು ಮತ್ತು ಗಿರಾಕಿಗಳೊಂದಿಗಿನ ಲೈಂಗಿಕ ಸಂಪರ್ಕದ ಸಮಯದಲ್ಲಿ ತಪ್ಪದೆ ನಿರೋದ್‍ಗಳನ್ನು ಬಳಕೆ ಮಾಡುವಂತೆ ಉತ್ತೇಜಿಸುವುದು.
• ಹೆಚ್‍ಐವಿಗೆ ತುತ್ತಾಗ ಬಹುದಾದ ಅತ್ಯಂತ ಅಪಾಯದಲ್ಲಿರುವ ಗುಂಪುಗಳ ಜನರನ್ನು ತಲುಪುವ/ಮುಟ್ಟುವ ಹಾಗು ಈ ಗುಂಪುಗಳ ಜನರಿಗಾಗಿ ಕಾರ್ಯಕ್ರÀಮ ಮಾಡುತ್ತಿರುವ ಸ್ವಯಂಸೇವಾ ಸಂಸ್ಧೆಗಳನ್ನು ಗುರಿತಿಸಿ-ಪಟ್ಟಿ ಮಾಡಿ ಅವುಗಳ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸುವುದು.
• ಹೆಚ್‍ಐವಿಗೆ ತುತ್ತಾಗಬಹುದಾದ ಗುಂಪುಗಳ ಜನರಿಗೆ ಲೈಂಗಿಕ ಸಂಪರ್ಕದ ಸೋಂಕಿಗೆ ಚಿಕಿತ್ಸೆ ನೀಡುವುದು.
• ಲೈಂಗಿಕ ವೃತ್ತಿ ನಿರತ ಮಹಿಳೆಯರು ಆರೋಗ್ಯ ತಪಾಸಣೆಗಾಗಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಲು ಯೋಜನೆ ರೂಪಿಸುವುದು.
• ಹೆಚ್‍ಐವಿಗೆ ತ್ತುತ್ತಾಗಬಹುದಾದ ಅತ್ಯಂತ ಅಪಾಯಕಾರಿ ಗುಂಪುಗಳಿಗೆ ಗುರಿ ಆಧಾರಿತ ಮಧ್ಯಂತರ ಚಟುವಟಿಕೆಗಳ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ನಿರೋಧ್ ಪೂರೈಸಲಾಗುವುದು.

 

ಈ ಎಲ್ಲಾ ಕಾರ್ಯಕ್ರಮಗಳು ರಾಜ್ಯದಲ್ಲಿರುವ ಲೈಂಗಿಕ ವೃತ್ತಿ ನಿರತ ಮಹಿಳೆಯರನ್ನು ತಲುಪುವಂತೆ ನಿಗಾ ವಹಿಸಲಾಗಿದ್ದು ಅನುಷ್ಠಾನದ ಸಲುವಾಗಿ ಕೆಳಕಂಡ ಫಲಿತಾಂಶಗಳನ್ನು ಕಾಣಬಹುದಾಗಿದೆ.

 

 1. ರಾಜ್ಯದಲ್ಲಿ ಅಸಂಫಟಿತರಾಗಿ ಸಮಾಜದ ಕಳಂಕ ತಾರತಮ್ಯಕ್ಕೆ ಒಳಾಗಾಗಿ ಬದುಕನ್ನು ಅವಮಾನಕರ ರೀತಿಯಲ್ಲಿ ನಡೆಸುತ್ತಿದ್ದ ಸಾವಿರಾರು ಮಹಿಳೆಯರನ್ನು ಗುರುತಿಸಲಾಗಿದೆ. ಈ ಮಹಿಳೆಯರಿಗೆ ಆಗುತ್ತಿರುವ ಹಿಂಸೆ ಮತ್ತು ಶೋಷಣೆ ವಿರುದ್ದಧ್ವನಿ ಎತ್ತಲು ಸಹಾಯವಾಗುವಂತೆ ಸಮುದಾಯ ಆಧಾರಿತ ಸಂಘಟನೆಗಳನ್ನು ರೂಪಿಸಲು ಸಹಾಯಕವಾಗಿದೆ. ಇದರಿಂದಾಗಿ ಅಸಹಾಯಕ ಮಹಿಳೆಯರಾಗಿ ಗುರುತಿಸಿಕೊಂಡಿದ್ದ ಅಸಂಖ್ಯಾತ ಲೈಂಗಿಕ ವೃತ್ತಿ ನಿರತ ಮಹಿಳೆಯರನ್ನು ಒಂದುಗೂಡಿಸಿ ತಮಗಾಗುತ್ತಿರುವ ಶೋಷಣೆಯನ್ನು ಪ್ರತಿರೋಧಿಸಿ ತಮ್ಮ ಮೇಲೆ ಆಗುತ್ತಿರುವ ಹಿಂಸೆಯನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ.
  2. ಕಾರ್ಯಕ್ರಮದ ಪ್ರಾರಂಭದಲ್ಲಿ ಲೈಂಗಿಕ ವೃತ್ತಿ ನಿರತ ಮಹಿಳೆಯರಿಗೆ ಹೆಚ್‍ಐವಿ ಎನ್ನುವುದು ಒಂದು ಆದ್ಯತೆಆಗಿರಲಿಲ್ಲ ಬದಲಾಗಿ ಸಮಾಜವುಅವರಿಗೆ ನೀಡುತ್ತಿದ್ದ ಹಿಂಸೆ, ಅವಮಾನ, ಶೋಷಣೆ, ತಾರತಮ್ಯ ಮುಂತಾದವುಗಳಿಂದ ಜರ್ಜರಿತರಾಗಿ ಬದುಕಿನ ಮೇಲೆ ಆಸೆಯನ್ನು ಕಳೆದುಕೊಂಡು ನಿಸ್ಸಹಾಯಕರಾದÀ ಮಹಿಳೆಯರಿಗೆ ಬೆಂಬಲ ನೀಡಿ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಸಮಾದಾನಕರ ಬದುಕನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ.
  3. ಲೈಂಗಿಕ ವೃತ್ತಿ ನಿರತ ಮಹಿಳೆಯರು ತಮಗೆ ಸಿಗಬೇಕಾದ ಸವಲತ್ತುಗಳನ್ನು ಸರ್ಕಾರದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನೇರವಾಗಿ ಮತ್ತು ಮುಕ್ತವಾಗಿ ಚರ್ಚಿಸುವ ಸಾಮಥ್ರ್ಯವನ್ನು ಪಡೆದುಕೊಂಡಿರುತ್ತಾರೆ.
  4. ಹಿಂಸೆ ಮತ್ತು ಶೋಷಣೆಯನ್ನು ಮಾಡುತ್ತಿರುವ ಗುಂಪುಗಳನ್ನು ಗುರುತಿಸಿ (ಪೋಲೀಸ್, ಗೂಂಡ, ಮಧ್ಯವರ್ತಿಗಳು ಇತ್ಯಾದಿ) ಅವರೊಂದಿಗೆ ವಕಾಲತ್ತು ನಡೆಸಿ ಹಿಂಸೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಯಶಸ್ಸುಗಳಿಸಲು ಸಾಧ್ಯವಾಗಿದೆ.

 

ಪ್ರಸ್ತುತ ಕರ್ನಾಟಕದಲ್ಲಿ ನ್ಯಾಕೋ ಅನುದಾನದಡಿಯಲ್ಲಿ 76 ಎಚ್‍ಐವಿ ತಡೆಕಾರ್ಯಕ್ರಮವನ್ನು ಅನುಷ್ಠಾನಗೊಳುಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 61 ಕಾರ್ಯಕ್ರಮಗಳು ಮಹಿಳಾ ಲೈಂಗಿಕ ವೃತ್ತಿನಿರತರಿಗೆ ಮತ್ತು ಎಮ್‍ಎಸ್‍ಎಂ ಸಮುದಾಯದವರಿಗಾಗಿ ಎಚ್‍ಐವಿ ತಡೆಕಾರ್ಯಕ್ರಮ ಅನುಷ್ಠಾನಗೊಳುಸುತ್ತಿದೆ, ಉಳಿದಂತೆ 2 ಪ್ರತ್ಯೇಕ ಮಂಗಳಮುಖಿಯರಿಗೆ , 1 ಮಾದಕ ವ್ಯಸನಿಗಳಿಗಾಗಿ, 8 ವಲಸಿಗರಿಗಾಗಿ, ಹಾಗೂ ಲಾರಿಚಾಲಕರಿಗಾಗಿ 4 ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಇತ್ತೀಚಿನ ನವೀಕರಣ​ : 04-09-2020 01:19 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080