ಅಭಿಪ್ರಾಯ / ಸಲಹೆಗಳು

ತಾಂತ್ರಿಕ ಬೆಂಬಲ ಘಟಕ

 ತಾಂತ್ರಿಕ ಬೆಂಬಲ ಘಟಕ

 

   ರಾಷ್ಟೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಗುರಿ ಆಧಾರಿತ (ಟಿ.ಐ) ಕಾರ್ಯಕ್ರಮದಡಿಯಲ್ಲಿರುವ, ಹೆಚ್.ಐ.ವಿ ತಡೆಗಟ್ಟುವಿಕೆ ಚಿಕಿತ್ಸೆ ಮತ್ತು ಆರೈಕೆ ಕಾರ್ಯಕ್ರಮಗಳ ಉನ್ನತ ಮಟ್ಟದ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಕರ್ನಾಟಕದಲ್ಲಿ ಸಾಧಿಸಲು ಮತ್ತು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯನ್ನು ಬೆಂಬಲಿಸಲು 2007ರಲ್ಲಿ  ಇಂಡಿಯನ್ ಹೆಲ್ತ ಆಕ್ಷನ್ ಟ್ರಸ್ಟ್, ತಾಂತ್ರಿಕ ಬೆಂಬಲ ಘಟಕವನ್ನು  ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ.

 

      ತಾಂತ್ರಿಕ ಬೆಂಬಲ ಘಟಕದ ಗುರಿ,  ಉದ್ದೇಶಗಳು ಪ್ರಮುಖವಾಗಿ ಟಿಐ ಕಾರ್ಯಕ್ರಮದಡಿಯಲ್ಲಿ, ತಾಂತ್ರಿಕ ವೃತ್ತಿಪರ ಪರಿಣತಿಯನು ತರುವುದು, ಹೆಚ್.ಐ.ವಿ ಸೊಂಕು ತಡೆಗಟ್ಟುವಲ್ಲಿ ಹಾಗೂ ಪುರಾವೆ ಆಧಾರಿತ ಕಾರ್ಯತಂತ್ರದ ಯೋಜನೆ ಮತ್ತು ಮಾನವ ಸಂಪನ್ಮೂಲ ಕ್ರೋಡೀಕರಣ ಜೋತೆ ಸಾಮರ್ಥ ಅಭಿವೃದ್ದಿ ಮತ್ತು ಗುರಿ ಆಧಾರಿತ ಚಟುವಟಿಕೆಗಳು ಸೇರಿವೆ.

 

ತಾಂತ್ರಿಕ ಬೆಂಬಲ ಘಟಕದಲ್ಲಿ 12 ಸದಸ್ಯರ ತಾಂತ್ರಿಕ ತಜ್ಞರ ತಂಡವನ್ನು ಹೊಂದಿದ್ದು, ಇದರಲ್ಲಿ 8 ಕಾರ್ಯಕ್ರಮ ಅಧಿಕಾರಿಗಳನ್ನು ಪ್ರಾದೇಶಿಕವಾಗಿ ನೀಯೊಜಿಸಲಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಜಿಲ್ಲೆಗಳ ಟಿಐಗಳು, ಸಂಪರ್ಕ ಕಾರ್ಯಕರ್ತರ ಯೋಜನೆ ಮತ್ತು ಒಪಿಯಾಡ್ ಸಬ್ಸ್ಟಿಟ್ಯೂಷನ್ ಥೆರೆಪಿ(ಒ.ಎಸ್.ಟಿ) ಕೇಂದ್ರಗಳಂತಹ 8-10 ಸ್ವತಂತ್ರ ಘಟಕಗಳನ್ನು ಬೆಂಬಲಿಸುತ್ತಾರೆ ಹಾಗೂ ಕಾರ್ಯಕ್ರಮಗಳ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಸಂಪರ್ಕ ಕಾರ್ಯಕರ್ತರ  ಕಾರ್ಯಕ್ರಮವು ರಾಜ್ಯದ ಒಂಬತ್ತು ಜಿಲ್ಲೆಗಳ  ಪ್ರತಿ ಜಿಲ್ಲೆಯ 100 ಹಳ್ಳಿಗಳನ್ನು ಒಳಗೊಂಡಂತೆ ಗ್ರಾವೀಣ ಹೆಚ್.ಐ.ವಿ ತಡೆಗಟ್ಟುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಟಿಎಸ್‍ಯು ಬೆಂಬಲ ನೀಡುತ್ತಿದೆ. ಈ ಯೋಜನೆಯ ಮೂಲಕ ಟಿಎಸ್‍ಯುಯ ಬೆಂಬದೊಂದಿಗೆ, ಸಮುದಾಯದ ಸದಸ್ಯರಿಗೆ ಹಾಗೂ ಗ್ರಾಮೀಣ ಪ್ರದೇಶದ ದುರ್ಬಲ ಪುರುಷರು ಹಾಗೂ ಮಹಿಳೆಯರಿಗೆ ಹೆಚ್.ಐ.ವಿ/ಎಸ್.ಟಿ.ಐ ಬಗ್ಗೆ ಮಾಹಿತಿ, ಅರಿವು, ತಡೆಗಟ್ಟುವಿಕೆ ಮತ್ತು ಅಪಾಯವನ್ನು ಕಡಿಮೆ ಮಾಡುವ ಅರಿವನ್ನು ಮೂಡಿಸುತ್ತದೆ.

 

ನಮ್ಮ ಸಾವೀಪ್ಯ/ಕಾರ್ಯತಂತ

 

ತಾಂತ್ರಿಕ ಬೆಂಬಲ ಘಟಕವು  ತಾಂತ್ರಿಕ ಬೆಂಬಲವನ್ನು ನೀಡುವುದರ ಜೊತೆಗೆ ಪುರಾವೆ ಆಧಾರಿತ ಕಾರ್ಯತಂತ್ರದ ಯೋಜನೆ, ಸಂಪನ್ಮೂಲ ಹಂಚಿಕೆ, ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಮಾರ್ಗದರ್ಶನ, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವವನ್ನು ಮತ್ತು ಇತರ ಇಲಾಖೆಗಳೊಂದಿಗೆ ಮುಖ್ಯವಾಹಿನಿಯಾಗುವುದು ಹಾಗೂ ಎನ್. ಜಿ. ಒ ಮತ್ತು ಸಮುದಾಯ ಆಧಾರಿತ ಸಂಘಟನೆಗೆ ಪ್ರೋತ್ಸಾಹಸಲಾಗುತ್ತದೆ,  ಸಾಮರ್ಥ ಅಭಿವೃದ್ದಿ ಪಡಿಸುವುದು, ಟಿಐ ಕಾರ್ಯಕ್ರಮಗಳನ್ನು ನಿರ್ವಹಿಸುವುದು, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ, 70% ಟಿಐ ಯೋಜನೆಗಳನ್ನು ಸಿ.ಬಿ.ಒ.ಗಳು ನಡೆಸುತ್ತಿದಾರೆ. ಸಮುದಯದವರು ಎದುರಿಸುತ್ತಿರುವ ಕಳಂಕ ಮತ್ತು ತಾರತಮ್ಯವನ್ನು ಕಡಿಮೆ ಮಾಡಲು ಟಿ.ಎಸ್.ಯು ವಿಭಿನ್ನ ವಕಾಲತ್ತು ಉಪಕ್ರಮಗಳನ್ನು ಅಳವಡಿಸಿಕೊಂಡಿದೆ. ವಕಾಲತ್ತು ಮತ್ತು ಸಜ್ಬುಗೊಳಿಸುವಿಕೆಯ ಮೂಲಕ ಸಮುದಾಯದ ಸದಸ್ಯರನ್ನು ಟಿ.ಐ ಸೇವೆಗಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

 

ರಾಜ್ಯಾದ್ಯಂತ ಎ.ಆರ್.ಟಿ ಕೇಂದ್ರಗಳ ಮೂಲಕ ರಾಜ್ಯ ಕಾನೂನು ಪ್ರಾಧಿಕಾರದ ಸಹಕಾರದೊಂದಿಗೆ ಉಚಿತ ಕಾನೂನು ಸೇವೆಗಳನ್ನು ಪಡೆಯಲು ಟಿ.ಎಸ್.ಯು ಸಮೂದಯದ ಸದಸ್ಯರಿಗೆ ಬೆಂಬಲ ನೀಡುತ್ತಿದೆ. ಜೊತೆಗೆ ಹೆಚ್.ಐ.ವಿ.ಯ ಹಕ್ಕುಗಳ ಕುರಿತು ವಕೀಲರು, ವೈದ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ನೀಡುವಲ್ಲಿಯೂ ಕಾರ್ಯ ಪ್ರವೃತ್ತವಾಗಿದೆ.

 

 

 

ಇತ್ತೀಚಿನ ನವೀಕರಣ​ : 04-09-2020 01:40 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080